ಲಾವಣ್ಯ ವಿದ್ಯಾ ಸಂಸ್ಥೆಯಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ, ಬೆಂ.ಗ್ರಾ.ಜಿಲ್ಲೆ:
ಲಾವಣ್ಯ ವಿದ್ಯಾಸಂಸ್ಥೆಯಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವಿಶ್ವಾಸ್ ಹನುಮಂತೇಗೌಡ ರವರು ಈ ದಿನದಂದು ಗುರುಹಿರಿಯರನ್ನ ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಇಂದಿನ ಯುವಕರೆಮುಂದಿನ ಭವಿಷ್ಯದ ಬಾವಿ ಪ್ರಜೆಗಳು ಆದುದರಿಂದ ಯುವಕರು ಗುರುಹಿರಿಯರ ಬಗ್ಗೆ ಗೌರವವಿರಬೇಕು ಎಂದು ಹೇಳಿದರು. ಪ್ರಾಂಶುಪಾಲ ಎಂ ಸಿ ಮಂಜುನಾಥ್ ಮಾತನಾಡಿ ಹಿಂದೂ ಬೌದ್ಧ ಮತ್ತು ಜೈನ ಧರ್ಮಗಳಲ್ಲಿ ಗುರುಪೂರ್ಣಿಮೆ ಆಚರಣೆ ಮಾಡಲಾಗುತ್ತದೆ ಈ ದಿನವನ್ನು ವೇದವ್ಯಾಸರ ಜಯಂತಿಯನ್ನಾಗಿಯು ಸಹ ಆಚರಿಸಲಾಗುತ್ತದೆ ಎಂದು ಹೇಳಿದರು.

- Advertisement - 

 ಕಾರ್ಯಕ್ರಮದಲ್ಲಿ  ಬಿಎಡ್ ಕಾಲೇಜು ಪ್ರಾಂಶುಪಾಲ ಜಿ ಕೃಷ್ಣಮೂರ್ತಿ ಕನ್ನಡ ಉಪನ್ಯಾಸಕರಾದ ಪರಿಮಳ ಮಾತನಾಡಿದರು. 

     ಆಡಳಿತ ಮಂಡಳಿಯವರು ಗುರುಪೂರ್ಣಿಮೆ ಪ್ರಯುಕ್ತ ಎಲ್ಲಾ ಉಪನ್ಯಾಸಕರು ಶಿಕ್ಷಕರನ್ನು ಗೌರವಿಸಿದರು ಸಮಾರಂಭದಲ್ಲಿ ಎಲ್ಲಾ ಉಪನ್ಯಾಸಕರು ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

- Advertisement - 

Share This Article
error: Content is protected !!
";