ಐದು ಗ್ಯಾರಂಟಿಗಳು ಜನರ ನೆಮ್ಮದಿ ಬದುಕಿಗೆ ಪ್ರೇರಣೆ: ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ಜನರ ಜೀವನವನ್ನು ಹಸನುಗೊಳಿಸುವಲ್ಲಿ ಯಶಸ್ವಿಯಾಗಿವೆ. ಕೋಟ್ಯಾಂತರ ಜನಕಡುಬಡವರು ಸರ್ಕಾರ ಐದುಗ್ಯಾರಂಟಿಗಳ ಸೌಲಭ್ಯ ಪಡೆದು ನೆಮ್ಮದಿಯ ಜೀವನಸಾಗಿಸುತ್ತಿದ್ದಾರೆ. ವಿಶೇಷವಾಗಿ ಶಕ್ತಿ ಹಾಗೂ ಗೃಹಲಕ್ಷ್ಮಿಯೋಜನೆಯಿಂದ ಸಂತೃಪ್ತರಾಗಿದ್ದು
, ಅವರಲ್ಲೂ ಸಹ ಸರ್ಕಾರದ ಬಗ್ಗೆ ಆತ್ಮವಿಶ್ವಾಸ ಹೆಚ್ಚಿದೆ ಎಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ಸೋಮವಾರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಶಕ್ತಿಯೋಜನೆಯಿಂದ ರಾಜ್ಯದ ಸುಮಾರು ೫೦೦ ಕೋಟಿ ಜನರು ಸದುಪಯೋಗವನ್ನು ಪೂರ್ಣಪ್ರಮಾಣದಲ್ಲಿ ಪಡೆದಿದ್ದು, ವಿಶೇಷ ಆಚರಣೆಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಹಾಗೂ ಅಲಂಕೃತ ಬಸ್‌ನ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

- Advertisement - 

ವಿರೋಧ ಪಕ್ಷಗಳು ಪ್ರಸ್ತುತ ಸರ್ಕಾರ ಹಣದ ಮುಗ್ಗಟ್ಟಿನಿಂದ ಯಾವುದೇ ಅಭಿವೃದ್ದಿ ಕಾರ್ಯಕ್ರಮ ಜಾರಿಗೊಳಿಸಿಲ್ಲವೆಂದು ಆರೋಪಿಸುತ್ತಾರೆ, ಸರ್ಕಾರ ಪ್ರತಿಯೋಜನೆಯನ್ನು ಟೀಕಿಸುತ್ತಾ ಬಂದಿದ್ದಾರೆ, ೧೧ ಜೂನ್ ೨೦೨೩ರಲ್ಲಿ ಶಕ್ತಿ ಯೋಜನೆ ಜಾರಿಗೆ ತರಲಾಯಿತು. ರಾಜ್ಯದ ೫೦೦ ಕೋಟಿ ಮಹಿಳೆಯರು ಬಸ್‌ಸೌಲಭ್ಯವನ್ನು ಸಂತೋಷದಿಂದ ಪಡೆದಿದ್ಧಾರೆ.

ಇಂದಿಗೂ ಸಹ ಈ ಯೋಜನೆಯ ಜನಪ್ರಿಯತೆ ಹೆಚ್ಚಿದೆ. ಮಹಿಳೆಯರು ಯಾವುದೇ ಆರ್ಥಿಕ ಹೊರೆಇಲ್ಲದೆ ರಾಜ್ಯಾದ್ಯಂತ ಉಚಿತಪ್ರಯಾಣವನ್ನು ಕೈಗೊಳ್ಳುವ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ. ಇದಕ್ಕಾಗಿ ೧೨೨೬೦ ಕೋಟಿ ಸರ್ಕಾರ ವೆಚ್ಚಮಾಡಿದೆ. ಚಿತ್ರದುರ್ಗ ಜಿಲ್ಲೆಯ ೧೯.೨೨, ಚಳ್ಳಕೆರೆ ೪.೯೧ಕೋಟಿ ಮಹಿಳಾಪ್ರಯಾಣಿಕರು ಈ ಯೋಜನೆಯ ಫಲಾನುಭವಿಗಳಾಗಿದ್ಧಾರೆ. ಗೃಹಲಕ್ಷ್ಮಿ ಯೋಜನೆ ಹಣ ಸಹ ತಡವಾಗಿಯಾದರೂ ಮಹಿಳೆಯರಿಗೆ ಸೇರುತ್ತಿದೆ. ಅನ್ನಭಾಗ್ಯ ಯೋಜನೆ, ಯುವನಿಧಿ, ಗೃಹಜ್ಯೋತಿ ಯೋಜನೆಗಳು ಯಶಸ್ವಿಯಾಗಿವೆಎಂದರು.

- Advertisement - 

ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಅನುಷ್ಠಾನದಲ್ಲಿ ಪಾರದರ್ಶಕತೆಯನ್ನು ರೂಡಿಸಿಕೊಂಡಿದೆ. ಎಲ್ಲರಿಗೂ ಒಂದೇರೀತಿಯ ಸೌಲಭ್ಯಗಳನ್ನು ಸರ್ಕಾರ ನೀಡುತ್ತಾ ಬಂದಿದೆ. ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಗ್ಯಾರಂಟಿ ಸಮಿತಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸಿದೆ. ಶಾಸಕರ ಮಾರ್ಗದರ್ಶನದಲ್ಲಿ ಕ್ಷೇತ್ರದ ಗ್ಯಾರಂಟಿಯೋಜನೆಗಳ ಅನುಷ್ಠಾನದ ಲೋಪದೋಷಗಳ ಬಗ್ಗೆ ಚರ್ಚೆ ನಡೆಸಿ ಸರಿಪಡಿಸಲಾಗುತ್ತಿದೆ ಎಂದರು.

ಕೆಎಸ್‌ಆರ್‌ಟಿಸಿ ಅಧಿಕಾರಿ ನಿರಂಜನ್‌ಮೂರ್ತಿ, ಪ್ರಭಾರಡಿಪೋ ವ್ಯವಸ್ಥಾಪಕ ಶಶಿಧರ ಮಾತನಾಡಿ, ಶಾಸಕರು ಚಳ್ಳಕೆರೆ ಡಿಪೋಕ್ಕೆ ಹೆಚ್ಚುವರಿಯಾಗಿ ೧೫ ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದಾರೆ. ಗ್ರಾಮೀಣ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕವ್ಯವಸ್ಥೆ ಮಾಡಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ನೀಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ಧಾರ್ ರೇಹಾನ್‌ಪಾಷ, ಇಒ ಎಚ್.ಶಶಿಧರ, ಪೌರಾಯುಕ್ತ ಎಚ್.ಜಿ.ಜಗರೆಡ್ಡಿ, ನಗರಸಭಾ ಅಧ್ಯಕ್ಷೆ ಶಿಲ್ಪಮುರುಳಿ, ಉಪಾಧ್ಯಕ್ಷೆ ಸಿ.ಕವಿತಾ, ಸದಸ್ಯರಾದ ಆರ್.ಮಂಜುಳಾ, ರಮೇಶ್‌ಗೌಡ, ಕೆ.ವೀರಭದ್ರಪ್ಪ, ಕಾಂಗ್ರೆಸ್‌ಮುಖಂಡರಾದ ಕೃಷ್ಣ, ಮಂಜುನಾಥ, ಚೌಳೂರುಪ್ರಕಾಶ್, ಶಶಿಧರ, ಸ್ವಾಮಿಎಸ್.ಎಚ್.ಸೈಯದ್, ಅನ್ವರ್‌ಮಾಸ್ಟರ್, ವೀರಭದ್ರಿ, ಬಡಗಿಪಾಪಣ್ಣ, ಗೀತಾಬಾಯಿ, ಬಿ.ಎಂ.ಭಾಗ್ಯಮ್ಮ ಮುಂತಾದವರು ಉಪಸ್ಥಿತರಿದ್ದರು.

 

 

 

 

Share This Article
error: Content is protected !!
";