ಸ್ವಯಂ ಉದ್ಯೋಗದಿಂದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ತರಲು ಸಾಧ್ಯ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜೀವನದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವುದರಿಂದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ತರಲು ಸಾಧ್ಯ ಎಂದು ಮುಖ್ಯ ಪ್ರವರ್ತಕ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಪರಿಶಿಷ್ಟ ಜಾತಿ ಹೈನುಗಾರಿಕೆ ಅಭಿವೃದ್ಧಿ ಸಹಕಾರ ಸಂಘದ ಪ್ರವರ್ತಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

- Advertisement - 

ಸರ್ಕಾರಿ ನೌಕರಿ ಗಗನ ಕುಸುಮವಾಗಿರುವ ಪ್ರಸ್ತುತ ಕಾಲದಲ್ಲಿ ವಿದ್ಯಾವಂತ ಯುವಕರು ಸ್ವ-ಉದ್ಯೋಗಕ್ಕೆ ಆದ್ಯತೆ ನೀಡುವುದು ಅನಿವಾರ್ಯವಾಗಿದೆ. ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಆರಂಭಿಸಲು ಬಂಡವಾಳ ಮತ್ತು ಉತ್ಪಾದನಾ ವಸ್ತುಗಳಿಗೆ  ಮಾರುಕಟ್ಟೆಯ ಸಮಸ್ಯೆ ಹೆಚ್ಚು. ಆದುದರಿಂದ ಕೆಲಸ ಚಿಕ್ಕದು ದೊಡ್ಡದು ಎಂದು ಯೋಚಿಸದೇ ದುಡಿಮೆಯ ಮಾರ್ಗ ಅನುಸರಿಸುವುದು ಮುಖ್ಯ.

ಸರ್ಕಾರ ಗ್ಯಾರಂಟಿ ಕಾರ್ಯಕ್ರಮಗಳಿಗೆ ಕೊಟ್ಟಿರುವ ಆದ್ಯತೆಯಂತೆಯೇ ಸ್ವಉದ್ಯೋಗ ಕ್ಕೂ ನೀಡುವುದು ಅತಿ ಮುಖ್ಯ. ಬಜೆಟ್‌ನಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆಗೆ ಹೆಸರಿಗೆ ಮಾತ್ರ ರೂ.೪೩,೦೦೦ಕೋಟಿ ಹಣವಿದ್ದು, ದಲಿತರ, ಹಿಂದುಳಿದವರ ವ್ಯಕ್ತಿಗತ ಬದುಕನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಬೇಕಾಗಿದೆ ಎಂದರು.

- Advertisement - 

ಸರ್ಕಾರದ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ ಸಹಕಾರದಿಂದ ದಲಿತರು ಹೈನುಗಾರಿಕೆಯಲ್ಲಿ ಪಾಲ್ಗೊಂಡು ಉತ್ತಮ ಜೀವನ ಕಟ್ಟಿಕೊಳ್ಳುವ ಆಶಯ ಹೊಂದಿ ಚಿತ್ರದುರ್ಗ ಜಿಲ್ಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿಯ ಹೈನುಗಾರಿಕೆ ಅಭಿವೃದ್ಧಿ ಸಹಕಾರ ಸಂಘ ಸ್ಥಾಪಿಸಲಾಗಿದೆ.

ಈ ಸಹಕಾರಿ ಸಂಘದಲ್ಲಿ ಷೇರುದಾರ ರಾಗಲು ಆಗಸ್ಟ್.೧೫ರವರೆಗೂ ಅವಕಾಶವಿದ್ದು, ಆಸಕ್ತಿಯಿರುವ ಪರಿಶಿಷ್ಟ ಜಾತಿಯ ವರ್ಗದವರು ಕೋಟೆ ನಾಡು ಬುದ್ಧ ವಿಹಾರದ ಕಚೇರಿಯ ಸಮಯದಲ್ಲಿ ಭೇಟಿ ನೀಡಿ ಸಂಪರ್ಕಿಸಬಹುದು. ಅಲ್ಲದೇ ಮುಖ್ಯಪ್ರವರ್ತಕರ ಮೊ.೯೯೦೦೫೯೨೪೭೩ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಈಸಂದರ್ಭದಲ್ಲಿ ಪ್ರವರ್ತಕಿ ಸುಲೋಚನಮದ್ದಪ್ಪ, ಬಿ.ಎಸ್.ಯೋಗರಾಜ್, ಬುರುಜನರೊಪ್ಪ  ಹನುಮಂತಪ್ಪ, ಟಿ.ಮೂರ್ತಿ, ತುರುವನೂರು ಜಗನ್ನಾಥ್, ನನ್ನಿವಾಳ  ರವಿಕುಮಾರ್, ಬಿ.ಜಿ.ಕೆರೆ ಬಸವರಾಜ್, ಉಪನ್ಯಾಸಕ ನಾಗೇಂದ್ರಪ್ಪ, ಮಂಜು, ಶಕುಂತಲಾ, ಉಷಾ, ಶಾಂತಮ್ಮ, ಪುಷ್ಪಪ್ರಕಾಶ್, ಗಿರಿಜಾ, ಶಿಲ್ಪಾ, ಭಾರತಿ ಇತರರಿದ್ದರು.

Share This Article
error: Content is protected !!
";