7 ಕೋಟಿ ಜನರ ಜಾತಿ ಗಣತಿಯನ್ನು ಕೇವಲ 15 ದಿನಗಳಲ್ಲಿ ಪೂರ್ಣಗೊಳಿಸಲು ಸಾಧ್ಯವೇ?

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿಂದುಳಿದ ಸಮುದಾಯಗಳ ಕಿವಿಗೆ ಹೂ ಮೂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹೊಸ ನಾಟಕ ಶುರುವಿಟ್ಟು ಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪ ಮಾಡಿದರು. 

ಸತತ 10 ವರ್ಷಗಳ ಕಾಲ ಕಾಂತರಾಜು ಆಯೋಗದ ಜಾತಿ ಸಮೀಕ್ಷೆಯ ವರದಿಯನ್ನು ರಾಜಕೀಯ ದಾಳ ಮಾಡಿಕೊಂಡು ಕರ್ನಾಟಕದ ಜನರ ತೆರಿಗೆಯ 165 ಕೋಟಿ ಹಣವನ್ನು ನಿರರ್ಥಕ ಗೊಳಿಸಿದ ಸಿದ್ದರಾಮಯ್ಯನವರು ಕೇವಲ 15 ದಿನಗಳಲ್ಲಿ ರಾಜ್ಯದ 7 ಕೋಟಿ ಜನರ ಜಾತಿ ಸಮೀಕ್ಷಾ ಕಾರ್ಯ ಪೂರೈಸುವುದಕ್ಕೆ ನಿರ್ದೇಶನ ನೀಡಿ ಮ್ಯಾಜಿಕ್ ಮಾಡಲು ಹೊರಟಿದ್ದಾರೆ ಎಂದು ವಿಜಯೇಂದ್ರ ದೂರಿದರು. 

- Advertisement - 

ನಿಗದಿತ ಅವಧಿ ಮೀರಿದರೂ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹಂಚಿಕೆಯ ಕುರಿತು ಪರಿಶಿಷ್ಟ ಸುಮುದಾಯಗಳ ಜಾತಿ ಗಣತಿಯ ಪ್ರಕ್ರಿಯೇ ಇನ್ನೂ ಪೂರ್ಣಗೊಂಡಿಲ್ಲ, ಇನ್ನು 7 ಕೋಟಿ ಜನರ ಜಾತಿಗಣತಿಯನ್ನು ಕೇವಲ 15 ದಿನಗಳಲ್ಲಿ (ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರ ವರೆಗೆ) ಪೂರ್ಣಗೊಳಿಸಲು ಸಾಧ್ಯವೇ

ಸಾಧ್ಯವಾಗಿಸುವುದಾದರೆ ಹಳೆ ಮದ್ಯ ಹೊಸ ಬಾಟಲಿಎಂಬ ಕೈಚಳಕ ತೋರಬಹುದಷ್ಟೇ? ಕರ್ನಾಟಕದ ಜನರನ್ನು ಮೂರ್ಖರನ್ನಾಗಿಸಿ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ, ಮುಖ್ಯಮಂತ್ರಿ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದಕ್ಕಾಗಿ ಜನರ ತೆರಿಗೆಯ ಹಣವನ್ನು ಮತ್ತೊಮ್ಮೆ ದಂಡ ಮಾಡಲು ಹೊರಟಿರುವುದು ಅತ್ಯಂತ ಶೋಚನೀಯ ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.

- Advertisement - 

ನೆಹರು ಕಾಲದಿಂದ 50 ವರ್ಷಗಳಷ್ಟು ಈ ದೇಶವನ್ನಾಳಿದ ಕಾಂಗ್ರೆಸ್ಸಿಗರು ಹಿಂದುಳಿದ ಸಮುದಾಯಗಳಿಗಾಗಿ ಕಾಳಜಿ ಪೂರ್ವಕ ಜಾತಿ ಸಮೀಕ್ಷೆಯಾಗಲಿ, ಮೀಸಲಾತಿಯನ್ನಾಗಲಿ ದೇಶದಲ್ಲಿ ಒದಗಿಸಲಿಲ್ಲ.

ಇದೇ ಪ್ರಥಮ ಬಾರಿಗೆ ಶತಮಾನದ ಅಂತರದಲ್ಲಿ (1931) ಸ್ವಾತಂತ್ರ್ಯಾ ನಂತರ ದೇಶದ ಜನಗಣತಿಯೊಂದಿಗೆ ಜಾತಿಗಣತಿಯನ್ನೂ ಸೇರ್ಪಡೆ ಗೊಳಿಸಿ ಚಾರಿತ್ರಿಕ ನಿರ್ಧಾರ ಕೈಗೊಂಡಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಹೆಜ್ಜೆಯನ್ನು ಬೆಂಬಲಿಸಿ ಕೇಂದ್ರದ ಜಾತಿಗಣತಿಯೊಂದಿಗೆ ಕೈಜೋಡಿಸುವ ಮೂಲಕ ಒಕ್ಕೂಟ ವ್ಯವಸ್ಥೆಯ ಉದ್ದೇಶವನ್ನು ಸಾರ್ಥಕ ಗೊಳಿಸುವ ಕಾರ್ಯಕ್ಕೆ ಸಹಕಾರ ನೀಡುವುದು ಬಿಟ್ಟು ಸಂವಿಧಾನದಲ್ಲಿ ಅವಕಾಶವೇ ಇಲ್ಲದೆ ಇದ್ದರೂ ರಾಜ್ಯದಲ್ಲಿ ಪ್ರತ್ಯೇಕ ಜಾತಿ ಗಣತಿ ನಡೆಸುವ ಪ್ರಯತ್ನಕ್ಕೆ ಮತ್ತೊಮ್ಮೆ ಕೈ ಹಾಕಿರುವ ಕಾಂಗ್ರೆಸ್ ಸರ್ಕಾರ ಹಣದ ವ್ಯಯ ಹಾಗೂ ಮಾನವ ಸಂಪನ್ಮೂಲದ ಶ್ರಮದ ವ್ಯರ್ಥಮಾಡಲು ಹೊರಟಿದೆ ಎಂದು ಅವರು ಟೀಕಿಸಿದರು.

 ಅಹಿಂದ ಸಮುದಾಯಗಳನ್ನು ವಂಚಿಸಿ ಸ್ವಾರ್ಥ ಹಾಗೂ ಮತಬ್ಯಾಂಕ್ ರಾಜಕಾರಣವನ್ನು ಇನ್ನೂ ಮುಂದುವರಿಸಿರುವ ಮುಖ್ಯಮಂತ್ರಿಗಳ ಅಧಿಕಾರ ದಾಹಿ ರಾಜಕಾರಣಕ್ಕೆ ಇನ್ನುಮುಂದೆ ಭವಿಷ್ಯ ಇಲ್ಲದ ರೀತಿಯಲ್ಲಿ ಜನರೇ ಬುದ್ದಿ ಕಲಿಸಲಿದ್ದಾರೆ ಎಂದು ವಿಜಯೇಂದ್ರ ಎಚ್ಚರಿಸಿದರು.

 

 

 

 

Share This Article
error: Content is protected !!
";