ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ಹೊಸಪೇಟೆ ನಗರದಲ್ಲಿ ಶನಿವಾರ ಕಾರ್ಗಿಲ್ ವಿಜಯ ದಿವಸ ಆಚರಣೆಗೆ ಶಾಸಕ ಹೆಚ್ ಆರ್ ಗವಿಯಪ್ಪನವರು ಚಾಲನೆ ನೀಡಿದರು. ಮಾಜಿ ಯೋಧರು, ಶಾಲೆ, ಕಾಲೇಜು ವಿದ್ಯಾರ್ಥಿಗಳು, ಎನ್ ಸಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನೂರಾರು ವಿದ್ಯಾರ್ಥಿಗಳು ಸುಮಾರು 100ಮೀಟರ್ ಉದ್ದದ ರಾಷ್ಟ್ರದ್ವಜ ಹಿಡಿದು ನಗರದ ಪ್ರೀಡಂ ಪಾರ್ಕ್ ನಿಂದ, ಮುಖ್ಯಬಿದಿಗಳಲ್ಲಿ ಪಾದ ಯಾತ್ರೆ ಮೂಲಕ ಪ್ರದರ್ಶನ ಮಾಡಿ ರಾಷ್ಟ್ರ ಪ್ರೇಮ ಮೆರೆದರು.

