ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಮಾರಿಕಣಿವೆ ಆಣೆಕಟ್ಟಿಗೆ ಸಮೀಪ ಇರುವ ಐಮಂಗಳ ಹೋಬಳಿ ಹಾಗೂ ಜವಗೊಂಡನಹಳ್ಳಿ ಈ ಎರಡು ಹೋಬಳಿಯ ಪ್ರಾಂತ್ಯದ ಭೂಗರ್ಭದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ ಈ ವಿಚಾರದಲ್ಲಿ ರೈತರು ಕಂಗಾಲಾಗಿದ್ದಾರೆ.
ವಾಣಿವಿಲಾಸ ಸಾಗರಕ್ಕೆ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ನೀರು ತುಂಬಿಸಿದ ಮೇಲೆ ಹಿರಿಯೂರು ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲ್ಲೂಕುಗಳಾದ ಹೊಳಲ್ಕೆರೆ, ಚಳ್ಳಕೆರೆ, ಚಿತ್ರದುರ್ಗ ಈ ಎಲ್ಲಾ ತಾಲೂಕುಗಳು ಸೇರಿದಂತೆ ಆಂದ್ರ ಪ್ರದೇಶದ ಮಡಕಶಿರಾ ತಾಲೂಕಿನ ಅಮರಪುರ ಮಂಡಲ್, ಶಿರಾ ತಾಲೂಕು ಹುಲಿಕುಂಟೆ ಹೋಬಳಿ ಹಾಗೂ ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಪ್ರಾಂತ್ಯದಲ್ಲಿ ಅಂತರ್ಜಲ ವೃದ್ಧಿಗೆ ಮಾರಿಕಣಿವೆ ಆಣೆಕಟ್ಟು ದೊಡ್ಡ ಪ್ರಮಾಣದಲ್ಲಿ ಸಹಕಾರಿಯಾಗಿದೆ.
ಈ ವಿಚಾರದಲ್ಲಿ ರೈತರ ಬದುಕಿಗೆ ಪ್ರೇರಣೆ ಸಿಕ್ಕಿದೆ. ವಾಣಿವಿಲಾಸ ಆಣೆಕಟ್ಟಿಗೆ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ಐಮಂಗಳ ಹೋಬಳಿ ಹಾಗೂ ಜವಗೊಂಡನಹಳ್ಳಿ ಹೋಬಳಿ ಭೂ ಮಂಡಲದಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿಲ್ಲ ಎಂಬುದು ತಿಳಿದುಬಂದಿದೆ.
ಆ ಭಾಗದಲ್ಲಿರುವ ಬೋರ್ವೆಲ್ ಗಳಲ್ಲಿ ನೀರು ಕಮ್ಮಿಯಾಗುತ್ತಿವೆ . ಕಳೆದ 2 ವರ್ಷಗಳ ಹಿಂದೆ ಮಳೆ ಹೆಚ್ಚಾಗಿ ಬಂದಾಗ ಐಮಂಗಳ ಹೋಬಳಿಯ ಪ್ರಾಂತ್ಯದಲ್ಲಿನ ಬೋರ್ವೆಲ್ ಗಳಲ್ಲಿ ನೀರು ವೃದ್ಧಿಯಾಗಿ ಆ ಭಾಗದಲ್ಲಿನ ರೈತರು ಇನ್ನು ನೀರಿನ ಬವಣೆ ನೀಗಿತು ಎಂಬ ಭರವಸೆಯಲ್ಲಿ ಬಹಳಷ್ಟು ರೈತರು ಅಡಿಕೆ ಸಸಿ ನೆಡುವ ಕೃಷಿಯಲ್ಲಿ ತೊಡಗಿದ್ದರು.
ಈ ವಿಚಾರದಲ್ಲಿ ಬ್ಯಾಂಕ್ ಗಳಲ್ಲಿ ಹಾಗೂ ಇನ್ನಿತರೆ ಸೌಲಭ್ಯಗಳಲ್ಲಿ ಸಾಲವನ್ನು ಮಾಡಿದ್ದಾರೆ. ಕಳೆದ ವರ್ಷ ಮಳೆ ಕಡಿಮೆಯಾದ ಕಾರಣಕ್ಕೆ ಐಮಂಗಳ ಹಾಗೂ ಜವಗೊಂಡನಹಳ್ಳಿ ಹೋಬಳಿಯಲ್ಲಿ ಅಂತರ್ಜಲ ಕುಸಿದಿದೆ ಬೋರ್ವೆಲ್ ಗಳಲ್ಲಿ ನೀರು ನಿಂತುಹೋಗಿವೆ. ರೈತರು ಜಮೀನುಗಳಲ್ಲಿ ಬೋರ್ ವೆಲ್ ಹಾಕಿಸುತ್ತಿದ್ದಾರೆ ನೀರು ಸಿಗುತ್ತಿಲ್ಲ. ರೈತರು ಕಂಗಾಲಾಗಿದ್ದಾರೆ.
ಐಮಂಗಳ ಹಾಗೂ ಜವಗೊಂಡನಹಳ್ಳಿ ಹೋಬಳಿಯಲ್ಲಿರುವ ಕೆರೆಗಳಿಗೆ ನೀರು ತುಂಬಿಸಿದರೆ ಬೋರ್ವೆಲ್ ಗಳಲ್ಲಿ ನೀರು ಹೆಚ್ಚಾಗುತ್ತದೆ ಎಂಬ ಭರವಸೆ ಆ ಭಾಗದಲ್ಲಿ ರೈತರಿಗೆ ಇದೆ. ಈ ವಿಚಾರದಲ್ಲಿ ಚಿತ್ರದುರ್ಗ ಜಿಲ್ಲಾ ಮಂತ್ರಿಗಳ ಜೊತೆ ಈ ವಿಚಾರದಲ್ಲಿ ಚರ್ಚಿಸಿ ಅದಷ್ಟು ಬೇಗನೆ ಐಮಂಗಳ ಹೋಬಳಿಯಲ್ಲಿರುವ ಕೆರೆಗಳಿಗೆ ನೀರು ತುಂಬಿಸಲು ಬೇಡಿಕೆ ಸಲ್ಲಿಸುತ್ತಿದ್ದೇನೆ.
ಈ ಹಿಂದೆ ರೈತ ಮುಖಂಡರಿಗೆ ಈ ವಿಚಾರದಲ್ಲಿ ವಿವರಿಸಿದ್ದೇನೆ. ಚಿತ್ರದುರ್ಗ ಜಿಲ್ಲಾ ಮಂತ್ರಿಗಳಿಗೆ ರಾಜ್ಯದ ನೀರಾವರಿ ಸಚಿವರು ಬಹಳಷ್ಟು ಆತ್ಮೀಯರು ಈ ಕೆಲಸ ಮಾಡಿಸಲು ಈ ಸಂದರ್ಭ ಸರಿಯಾಗಿದೆ ಎಂದು ರಘು ಗೌಡ ಅರ್ಥೈಸಿಕೊಂಡಿದ್ದಾರೆ.

