ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಆಡಳಿತದಲ್ಲಿ ಡ್ರಗ್ಸ್ ರಾಜ್ಯವಾಗುತ್ತಿದೆ ಕರ್ನಾಟಕ ! ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
” ಕರ್ನಾಟಕ ಕಾಂಗ್ರೆಸ್ ಸರ್ಕಾರ ದುರಾಡಳಿತದಲ್ಲಿ ರಾಜ್ಯದ ಗುಪ್ತಚರ ಇಲಾಖೆ ಸಂಪೂರ್ಣ ನಿದ್ದೆ ಮಾಡ್ತಿದ್ದು, ಗೃಹ ಇಲಾಖೆ ಇದ್ದು ಜೀವ ಇಲ್ಲದಂತಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ “ಮಾದಕ ವಸ್ತು ತಯಾರಿಕಾ ಫ್ಯಾಕ್ಟರಿ” ನಡೆಯುತ್ತಿರುವುದನ್ನು ನೆರೆಯ ಮಹಾರಾಷ್ಟ್ರ ಪೊಲೀಸರು ರಾಜ್ಯಕ್ಕೆ ಬಂದು ಪತ್ತೆ ಮಾಡಿದ್ದಾರೆ.
ಈ ಕುರಿತು ಕರ್ನಾಟಕ ಪೊಲೀಸರಿಗೆ ಸಣ್ಣ ಸುಳಿವು ಇರಲಿಲ್ಲ ಎನ್ನುವುದು ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯವನ್ನು ತೋರಿಸುತ್ತಿದೆ.
ಇಡೀ ದೇಶವೆ ಬೆಚ್ಚಿ ಬೀಳವಂತಹ “ಡ್ರಗ್ಸ್ ಫ್ಯಾಕ್ಟರಿ” ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಪತ್ತೆಯಾಗಿರುವುದು ಆತಂಕಕಾರಿ ಎಂದು ಜೆಡಿಎಸ್ ತೀವ್ರ ವಾಗ್ದಾಳಿ ಮಾಡಿದೆ.
ರಾಜ್ಯದಲ್ಲಿ ಇಷ್ಟೆಲ್ಲ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ “ನನಗೇನು ಗೊತ್ತಿಲ್ಲ “, “ಅದರ ಬಗ್ಗೆ ಮಾಹಿತಿ ಇಲ್ಲ” ಎನ್ನುವ ಗೃಹ ಸಚಿವ ಡಾ.ಜಿ ಪರಮೇಶ್ವರ ಅಪ್ರಯೋಜಕ ಹೇಳಿಕೆಗಳು ನಾಚಿಕೆಗೇಡು ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.

