ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶತಮಾನದ ಹಿಂದೆಯೇ ಹೆಣ್ಣುಮಕ್ಕಳಿಗೆ ಶಾಲೆ, ಕಾಲೇಜು, ವಸತಿ ನಿಲಯ ನಿರ್ಮಿಸಿ ಶಿಷ್ಯವೇತನ ನೀಡಿದ್ದ ಕರ್ನಾಟಕದ ಭಾಗ್ಯವಿಧಾತ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ,
ಸರ್ಕಾರಿ ವಸತಿ ಶಾಲೆಗಳಲ್ಲಿ ಹೊಟ್ಟೆಗೆ ಊಟವಿಲ್ಲದೆ 250 ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿರುವ ಕರ್ನಾಟಕ ದೌರ್ಭಾಗ್ಯವಿಧಾತ ಸಿಎಂ ಸಿದ್ದರಾಮಯ್ಯ ಅವರೆಲ್ಲಿ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಹಲೋ ಅಪ್ಪ ಖ್ಯಾತಿಯ ಡಾ.ಯತೀಂದ್ರ ಅವರೇ, ಈ ಸುದ್ದಿ ಒಮ್ಮೆ ನೋಡಿ. ನಿಮ್ಮ ತಂದೆಯವರ “ಕೊಡುಗೆ”ಯನ್ನ ನೀವೇ ಮೆಚ್ಚಿಕೊಳ್ಳಬೇಕು ಎಂದು ಅಶೋಕ್ ಅವರು ವ್ಯಂಗ್ಯವಾಡಿದ್ದಾರೆ.

