ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಈ ನಾಡಿನ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ರೈತರೆಂದರೆ ತಾತ್ಸಾರ, ಈ ನಾಡಿನ ರೈತರಿಗೆ ಒಳಿತಾಗುವ ಒಂದೇ ಒಂದು ಕಾರ್ಯಕ್ರಮಗಳನ್ನಾಗಲಿ, ಯೋಜನೆಗಳನ್ನಾಗಲಿ ತೆಗೆದುಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರೆಂದರೆ ರೈತನಾಯಕ ಎಂದು ಈಗಲೂ ನಾಡಿನ ಜನ ನೆನೆದು ಗೌರವಿಸುತ್ತಾರೆ. ಅವರ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ಸಾವಿರಾರು ಕೋಟಿ ರೂಗಳನ್ನು ಬಫರ್ ಸ್ಟಾಕ್ ಗೆ ಹಣ ಮೀಸಲಿಟ್ಟಿದ್ದರು, ಆದರೆ ಈ ಕರ್ನಾಟಕ ಕಾಂಗ್ರೆಸ್ ಸರ್ಕಾರ ಆ ಹಣದಲ್ಲೂ ಭಾಗಶಃ ಕಡಿತಗೊಳಿಸಿದೆ ಎಂದು ವಿಜಯೇಂದ್ರ ದೂರಿದರು.
ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು ರೈತರ ಬಿತ್ತನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿತ್ತು, ಜಿಲ್ಲಾವಾರು ಅಗತ್ಯವಿರುವ ರಸಗೊಬ್ಬರದ ಅಗತ್ಯತೆಗಳ ಕುರಿತು ಮುಂಚಿತವಾಗಿಯೇ ಚರ್ಚಿಸಬೇಕಿತ್ತು,
ರಾಜ್ಯ ಸರ್ಕಾರ ತನ್ನ ಕರ್ತವ್ಯ ಮರೆತು ರೈತರನ್ನು ಬೀದಿಗೆ ತರಲು ಹೊರಟಿದೆ. ಆದ್ದರಿಂದ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಭಾರತೀಯ ಜನತಾ ಪಾರ್ಟಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ವಿಜಯೇಂದ್ರ ಎಚ್ಚರಿಸಿದರು.

