ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೈಗಾರಿಕೆಗಳು ವಿಸ್ತಾರವಾಗುತ್ತಿವೆ, ಉದ್ಯೋಗಗಳ ಅವಕಾಶಗಳು ಹೆಚ್ಚುತ್ತಿವೆ, ಮತ್ತು ರಾಜ್ಯದ ಪ್ರತಿಯೊಂದು ಭಾಗಕ್ಕೂ ಬೆಳವಣಿಗೆ ತಲುಪುತ್ತಿದೆ. ಕರ್ನಾಟಕ ತನ್ನ ಭವಿಷ್ಯವನ್ನು ಹೇಗೆ ರೂಪಿಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಏರೋಸ್ಪೇಸ್, ಎಲೆಕ್ಟ್ರಿಕ್ ವಾಹನಗಳು, ತಾಂತ್ರಿಕ ಜವಳಿ, FMCG ಸೇರಿದಂತೆ ಆರು ಪ್ರಮುಖ ಕ್ಷೇತ್ರಗಳು ರಾಜ್ಯದ ಅಭಿವೃದ್ಧಿಗೆ ಶಕ್ತಿ ತುಂಬಿವೆ ಎಂದರು.
ಮುಂದಿನ 5 ವರ್ಷಗಳಲ್ಲಿ:
20 ಲಕ್ಷ ಹೊಸ ಉದ್ಯೋಗಗಳು, 7.5 ಲಕ್ಷ ಕೋಟಿ ಹೂಡಿಕೆ ಯುವಕರಿಗೆ ಹೊಸ ಅವಕಾಶಗಳು, ಸ್ಥಳೀಯ ಉದ್ಯಮಗಳಿಗೆ ಬೆಂಬಲ, ಮತ್ತು ರಾಜ್ಯದ ಮೂಲೆ ಮೂಲೆಯನ್ನು ತಲುಪುವ ಬೆಳವಣಿಗೆ ನಿರೀಕ್ಷಿಸಲಾಗಿದೆ ಎಂದು ಸಚಿವ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

