ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಸಕ್ರೀಯವಾಗಿದ್ದು ಆತಂಕ ಹುಟ್ಟಿಸುತ್ತಿವೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಇತ್ತೀಚಿನ ಘಟನೆಗಳನ್ನು ಗಮನಿಸಿದರೆ ಕರ್ನಾಟಕ ಉಗ್ರರ ಆಶ್ರಯ ತಾಣವಾಗುತ್ತಿದೆ ಎಂಬ ಅನುಮಾನ ರಾಜ್ಯದ ಜನರನ್ನು ಕಾಡಲು ಶುರುವಾಗಿದೆ. ಅಲ್ ಖೈದ್ ಭಯೋತ್ಪಾದಕ ಸಂಘಟನೆಯ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ನಿರ್ವಹಿಸುತ್ತಿದ್ದ ಶಮಾ ಪರ್ವೀನ್ ಎಂಬ ಮಹಿಳೆಯನ್ನು ಗುಜರಾತ್ ಎಟಿಎಸ್ ಬೆಂಗಳೂರಿನಲ್ಲಿ ಬಂಧಿಸಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಪದವೀಧರೆಯಾಗಿರುವ 30 ವರ್ಷದ ಆಕೆ ಅಲ್ ಖೈದಾ ಸಂಘಟನೆ ಪರ ಪ್ರಚಾರ ಹಾಗೂ ಪ್ರಭಾವಿತ ಯುವಕರ ಬಗ್ಗೆ ಮಾಹಿತಿ ನೀಡುತ್ತಾ, ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದಳು. ಪಾಕಿಸ್ತಾನಿ ವಾಟ್ಸ್ ಆ್ಯಪ್ ಗುಂಪುಗಳ ಭಾಗವಾಗಿದ್ದಳು ಎನ್ನುವುದನ್ನು ಎಟಿಎಸ್ ತನಿಖೆ ವೇಳೆ ಬಯಲಿಗೆ ಎಳೆದಿದೆ.
ಕೆಲ ದಿನಗಳ ಹಿಂದಷ್ಟೆ ಲಷ್ಕರೆ ತಯ್ಬಾ (LET) ಉಗ್ರ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಶಂಕಿತರನ್ನು NIA ಬಂಧಿಸಿತ್ತು.
ಮೊನ್ನೆಯಷ್ಟೇ, ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ಹಲವರನ್ನು ಬಂಧಿಸಿತ್ತು. ಉಗ್ರ ಚುಟುವಟಿಕೆಗಳು , ಉಗ್ರರ ಸ್ಲೀಪರ್ ಸೆಲ್‌ಗಳ ಬಗ್ಗೆ ಏನೂ ಗೊತ್ತಿಲ್ಲದ, ಆಕಸ್ಮಿಕ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರನ್ನು ಪಡೆದಿರುವುದು ನಾಡಿನ ಜನರ ದುರ್ದೈವ ಎಂದು ಜೆಡಿಎಸ್ ಹರಿಹಾಯ್ದಿದೆ.

