ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಗಣಿಬಾಧಿತ ಪ್ರದೇಶದ ಹಳ್ಳಿಗಳಲ್ಲಿ ಅರ್ಹ ವಸತಿ, ನಿವೇಶನ ರಹಿತರನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಆಗಸ್ಟ್ 11 ರಿಂದ 22 ರವರೆಗೆ ಗ್ರಾಮ ಸಭೆಗಳನ್ನು ಹಳ್ಳಿಗಳಲ್ಲಿ ಕೈಗೊಳ್ಳಲು ದಿನಾಂಕ ನಿಗದಿಪಡಿಸಲಾಗಿದೆ.
ಮೊದಲ ಆದ್ಯತೆಯಾಗಿ ಹೊಳಲ್ಕೆರೆ ತಾಲ್ಲೂಕಿನ 5 ಕಿ.ಮೀ. ವ್ಯಾಪ್ತಿಗೆ ಬರುವ ಗಣಿ ಬಾಧಿತ ಪ್ರದೇಶದ ಚಿತ್ರಹಳ್ಳಿ, ಆಡನೂರು, ಉಪ್ಪರಿಗೇನಹಳ್ಳಿ, ಹೆಚ್.ಡಿ. ಪುಯರ, ಗುಂಜಿಗನೂರು, ಟಿ. ನುಲೇನೂರು, ತೇಕಲವಟ್ಟಿ ಮತ್ತು ತಾಳ್ಯ ಗ್ರಾಮ ಪಂಚಾಯತಿಡಿ ಬರುವ ಹಳ್ಳಿಗಳಲ್ಲಿ ಆಗಸ್ಟ್ 11 ರಿಂದ 22 ರವರೆಗೆ ಗ್ರಾಮ ಸಭೆಗಳನ್ನು ಆಯೋಜಿಸಲು ದಿನಾಂಕ ನಿಗದಿಪಡಿಸಲಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ನಡೆಸಲಾಗುವ ಗ್ರಾಮ ಸಭೆಗಳ ದಿನಾಂಕದ ವಿವರ ಇಂತಿದೆ.
ಚಿತ್ರಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಆ. 11 ರಂದು ಕೇಶವಾಪುರ, 12 ರಂದು ಹನುಮನಕಟ್ಟೆ, 13 ರಂದು ಅಮೃತಾಪುರ. ಆಡನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಆ. 13 ರಂದು ಅರಸಘಟ್ಟ, 14 ರಂದು ಮೇಕೆನಹಟ್ಟಿ. ಉಪ್ಪರಿಗೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಆ. 16 ರಂದು ಬೂದಿಪುರ, 18 ರಂದು ಗೂಳಿಹೊಸಹಳ್ಳಿ,
19 ರಂದು ಹಾಲೇನಹಳ್ಳಿ. ಹೆಚ್.ಡಿ.ಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಆ. 16 ರಂದು ಬೋರೆನಹಳ್ಳಿ, 18 ರದು ಪಂಪಾಪುರ, 19 ರಂದು ರಾಮೇನಹಳ್ಳಿ, 20 ರಂದು ನೆಲ್ಲಿಕಟ್ಟೆ, 21 ರಂದು ಮತ್ತಿಘಟ್ಟ, 22 ರಂದು ಕಸವನಹಳ್ಳಿ. ಆ. 14 ರಂದು ಗುಂಜಿಗನೂರು ಗ್ರಾ.ಪಂ.ನ ಚಿಕ್ಕಂದವಾಡಿ. ಟಿ. ನುಲೇನೂರು ಗ್ರಾ.ಪಂ. ನಲ್ಲಿ ಆ. 18 ರಂದು ದಗ್ಗೆ, ಆ. 19 ರಂದು ಬಂಜೆಗೊಂನಹಳ್ಳಿ. ಆ. 20 ರಂದು ತೇಕಲವಟ್ಟಿ ಗ್ರಾ.ಪಂ.ನ ಕಣಿವೆಜೋಗಿಹಳ್ಳಿ ಹಾಗೂ ತಾಳ್ಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಆ. 13 ರಂದು ವೆಂಕಟೇಶಪುರ ಮತ್ತು
ಆ. 14 ರಂದು ಕುಮ್ಮಿನಘಟ್ಟ ಗ್ರಾಮದಲ್ಲಿ ಗ್ರಾಮ ಸಭೆ ನಡೆಯಲಿದೆ.
ಈ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ವಸತಿ, ನಿವೇಶನ ರಹಿತ ಅರ್ಹ ಫಲಾನುಭವಿಗಳು ನಿಗದಿಪಡಿಸಿದ ಗ್ರಾಮ ಸಭೆಗಳ ದಿನಾಂಕದAದು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೊಳಲ್ಕೆರೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

