ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಹರಿಯಬ್ಬೆ ಗ್ರಾಮದಲ್ಲಿ ಹಮ್ಮಿಕೊಂಡ ಜನರೊಂದಿಗೆ ಜನತಾದಳ ಸದಸ್ಯತ್ವ ಅಭಿಯಾನ ಆರಂಭಕ್ಕೂ ಮುನ್ನ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಪ್ರೀತಿಯಿಂದ ಅದ್ಧೂರಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡರು.
ನಂತರ ಹರಿಯಬ್ಬೆ ಗ್ರಾಮದ ಹನುಮಂತರಾಯ ಸ್ವಾಮಿ(ಆಂಜನೇಯ) ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಂತರ ಎತ್ತಿನ ಗಾಡಿಯಲ್ಲಿ ಆಯೋಜಿಸಿದ್ದ ರೋಡ್ ಶೋ ನಲ್ಲಿ ಪಾಲ್ಗೊಂಡಿದ್ದರು.
ಈ ಅವಿಸ್ಮರಣೀಯ ಗೌರವಕ್ಕೆ ನಿಖಿಲ್ ಕುಮಾರಸ್ವಾಮಿ ಪಾತ್ರರಾದರು. ಈ ಸಂದರ್ಭದಲ್ಲಿ ಕಾರ್ಯಕರ್ತ ಬಂಧುಗಳು ತೋರಿದ ಪ್ರೀತಿಗೆ ಧನ್ಯಗಳನ್ನು ನಿಖಿಲ್ ಅರ್ಪಿಸಿದು.
ಜನರೊಂದಿಗೆ ಜನತಾದಳ-ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನದ ರಾಜ್ಯ ಪ್ರವಾಸದ ಭಾಗವಾಗಿ 14 ಜಿಲ್ಲೆಗಳ 42 ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ 25 ದಿನಗಳಿಂದ ಪ್ರವಾಸ ಮಾಡಿರುವ ನಿಖಿಲ್ ಕುಮಾರಸ್ವಾಮಿ ಅವರು 6350 ಕಿ.ಮೀ ಪ್ರಯಾಣ ಮಾಡುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕಾರ್ಯ ಮಾಡಿದ್ದಾರೆ.
ಜನರೊಂದಿಗೆ ಜನತಾದಳದ ಸಭೆಗೆ ಆಗಮಿಸಿದಾಗ ಪಕ್ಷದ ಮುಖಂಡರು, ಕಾರ್ಯಕರ್ತ ಬಂಧುಗಳು ಹಾಗೂ ನಾಡಿನ ಜನತೆ ನನಗೆ ತೋರಿದ ಪ್ರೀತಿಗೆ ನಾನು ಸದಾ ಚಿರ ಋಣಿ.
ನಿಮ್ಮೆಲ್ಲರ ಆಶೀರ್ವಾದವೇ ನನಗೆ ಶೀರಕ್ಷೆ ಜನರೊಂದಿಗೆ ಜನತಾದಳ ಅಭಿಯಾನ ಯಶಸ್ವಿಗೆ ಕಾರ್ಯಕರ್ತರು, ರಾಜ್ಯದ ಜನತೆಗೆ ಅಭಿನಂದನೆಗಳನ್ನು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

