ತಿರುಕಯಾನ ನಾಟಕದ ಇಂಗ್ಲೀಷ್ ಭಾಷಾನುವಾದಿತ ಕೃತಿ ಬಿಡುಗಡೆ ಮಾಡಿದ ಎಸ್ ಕೆಬಿ

News Desk

ಚಂದ್ರವಳ್ಳಿ ನ್ಯೂಸ್, ಮಲ್ಲಾಡಿಹಳ್ಳಿ:
ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ನಡೆದ ಶ್ರೀ ರಾಘವೇಂದ್ರ ಸ್ವಾಮೀಜಿ, ಶ್ರೀ ಸೂರ್ ದಾಸ್ ಜಿ ಅವರ ಸಂಸ್ಕರಣೆ ಕಾರ್ಯಕ್ರಮದಲ್ಲಿ ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ ಇವರು ಕನ್ನಡದಲ್ಲಿ ರಚಿಸಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಕುರಿತ ತಿರುಕಯಾನನಾಟಕದ ಇಂಗ್ಲಿಷ್ ಭಾಷಾನುವಾದಿತ ‘Journey of a Yoga Master’ ಕೃತಿ ಲೋಕಾರ್ಪಣ ಮಾಡಲಾಯಿತು.

ಆಶ್ರಮದ ಕಾರ್ಯದರ್ಶಿ ಎಸ್. ಕೆ. ಬಸವರಾಜನ್ ಕೃತಿ ಬಿಡುಗಡೆ ಮಾಡಿ, ಮೈಸೂರು ವಿಶ್ವವಿದ್ಯಾನಿಲಯದ ಆಂಗ್ಲ ಭಾಷಾ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಎಂ.ಹೆಚ್. ರುದ್ರಮುನಿ ಅವರು ಕೃತಿ ಅವಲೋಕನ ಮಾಡಿದರು.

- Advertisement - 

ಕೃತಿ ಅನುವಾದಕರುಗಳಾದ ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಮತ್ತು ಡಾ. ಜಿ.ಎನ್.ಮಲ್ಲಿಕಾರ್ಜುನಪ್ಪ, ಹಿರಿಯ ವ್ಯಂಗ್ಯ ಚಿತ್ರಕಾರ ಹೆಚ್. ಬಿ. ಮಂಜುನಾಥ್, ಆಶ್ರಮದ ಟ್ರಸ್ಟಿಗಳು ಹಾಗೂ ಆಡಳಿತಾಧಿಕಾರಿ ಪಾಂಡುರಂಗಮೂರ್ತಿ ಇವರುಗಳು ಉಪಸ್ಥಿತರಿದ್ದರು.

 

- Advertisement - 

 

Share This Article
error: Content is protected !!
";