ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಥೈಲ್ಯಾಂಡ್ ಮಾವು, ಸಾವಯವ ಕೃಷಿ: ವಿಜಯಪುರ ಜಿಲ್ಲೆಯ ಯುವ ರೈತನಿಂದ ಆದಾಯದ ಹೊಸ ಅಧ್ಯಾಯ! ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅಭಿಪ್ರಾಯಪಟ್ಟರು.
ವಿಜಯಪುರ ಜಿಲ್ಲೆಯ ನಾಗಠಾಣಾ ವಿಧಾನಸಭಾ ಕ್ಷೇತ್ರದ ಕಗ್ಗೋಡ ಗ್ರಾಮದ ಪ್ರಗತಿಪರ ಕೃಷಿಕ ನವೀನ ಮಂಗಾನವರ ಯಶೋಗಾಥೆ ಕೇಳುತ್ತಿದ್ದರೆ ಸಂತಸ ತುಂಬಿ ಬರುತ್ತದೆ. ನಾವು ಜಾರಿಗೊಳಿಸಿರುವ ನೀರಾವರಿ ಯೋಜನೆಗಳ ಲಾಭ ಪಡೆದು ಯಶಸ್ವಿ ಕೃಷಿಕರಾಗಿದ್ದಾರೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.
ಇತ್ತೀಚೆಗೆ ನವೀನ ಹಾಗೂ ಅವರ ಗೆಳೆಯ ನಿತೀಶ್ ಬಿರಾದಾರ್ ಅವರು ಮಾವಿನ ಹಣ್ಣುಗಳೊಂದಿಗೆ ನನ್ನನ್ನು ಭೇಟಿಯಾದರು. ಅವರು 7 ಎಕರೆ ಜಮೀನಿನಲ್ಲಿ ಥೈಲ್ಯಾಂಡಿನಿಂದ ತರಿಸಲಾದ ವಿಶಿಷ್ಟ ತಳಿಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಿರುವುದಾಗಿ ತಿಳಿಸಿದರು.
ಸುಮಾರು 3,000 ಮಾವಿನ ಗಿಡಗಳನ್ನು ನೆಟ್ಟು, ಸಂಪೂರ್ಣ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಗಿಡಗಳು ವರ್ಷಪೂರ್ತಿ ಇಳುವರಿ ನೀಡುತ್ತವೆ ಎಂದು ನಿತೀಶ್ ಬಿರಾದಾರ್ ವಿವರಿಸಿದರು.
ಕನಿಷ್ಠವೆಂದರೂ ನಿತ್ಯ 10 ಬಾಕ್ಸ್ ಗಳ ಮಾವು, ಗರಿಷ್ಠವೆಂದರೆ 15 ಬಾಕ್ಸ್ ಗಳ ಹಣ್ಣು ಲಭ್ಯವಾಗುತ್ತಿದ್ದು, ಪ್ರತಿ ಬಾಕ್ಸ್ ಗೆ ರೂ. 1,000 ಗಳಿಸುತ್ತಿರುವುದಾಗಿ ತಿಳಿಸಿದರು.
ಯಾವ ಸಾಫ್ಟ್ ವೇರ್ ಎಂಜಿನಿಯರ್ ಗೂ ಕಡಿಮೆ ಇಲ್ಲದಂತೆ ಜೀವನ ಸಾಗಿಸುತ್ತಿರುವ ಇವರ ಯಶಸ್ಸು, ನಮ್ಮೆಲ್ಲ ರೈತರಿಗೂ ಸ್ಪೂರ್ತಿಯಾಗಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು.

