ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಆರ್ಥಿಕತೆ ಸತ್ತಿದೆ ಎಂದು ಊಳೀಡುತ್ತಿರುವ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುನಾರ್ ಅವರೇ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ,
ನಿಮ್ಮ ಬೌದ್ಧಿಕತೆ ಯಾವ ಮಟ್ಟಕ್ಕೆ ಇಳಿದಿದೆ ? ಡಿಕೆ ಶಿವಕುಮಾರ್ ಆಸ್ತಿಮೌಲ್ಯ ಸಾವಿರಾರು ಪಟ್ಟು ಹೆಚ್ಚಳ 2004 ರಲ್ಲಿ – 8 ಕೋಟಿ ರೂ. 2008 ರಲ್ಲಿ – 75 ಕೋಟಿ ರೂ. 2013 ರಲ್ಲಿ – 215 ಕೋಟಿ ರೂ. 2018 ರಲ್ಲಿ – 840 ಕೋಟಿ ರೂ. 2023 –1414 ಕೋಟಿ ರೂ., ಡಿಸಿಎಂ ಅವರೇ 20 ವರ್ಷದಲ್ಲಿ ರಾಕೆಟ್ ವೇಗದಲ್ಲಿ ನಿಮ್ಮ ಆಸ್ತಿ ಸಾವಿರಾರು ಪಟ್ಟು ಹೆಚ್ಚಾಗಿದೆ ಹೇಗೆ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಭಾರತದ ಆರ್ಥಿಕತೆಯನ್ನು ಅವಮಾನಿಸುತ್ತಿರುವ ಕಾಂಗ್ರೆಸ್ಸಿಗರೇ, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಆಸ್ತಿ 20 ವರ್ಷದಲ್ಲಿ ರಾಕೆಟ್ ವೇಗದಲ್ಲಿ ಸಾವಿರಾರು ಪಟ್ಟು ಹೆಚ್ಚಾಗಿದೆ ಹೇಗೆ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

