ನ್ಯಾನೋ ಡಿಎಪಿ ಬಳಕೆಯಿಂದ ಬೆಳೆಗಳು ಸಮೃದ್ದ : ಡಿಡಿ ಉಮೇಶ್

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಇತ್ತೀಚಿನ ದಿನಗಳಲ್ಲಿ ರೈತರು ತಮ್ಮ ಬೆಳೆಗಳಿಗೆ ಯೂರಿಯ ಗೊಬ್ಬರವನ್ನು ಸಿಂಪಡಿಸಬೇಕೆಂಬ ಮಹದಾಸೆಯಿಂದ ಎಲ್ಲೆಡೆ ಸರಥಿಸಾಲಿನಲ್ಲಿ ನಿಂತು ಯೂರಿಯ ಗೊಬ್ಬರಪಡೆಯುವ ಹರಸಾಹಸ ಮುಂದುವರೆಸಿದ್ಧಾರೆ.

ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಸಾಕಷ್ಟು ಪ್ರಮಾಣದಲ್ಲಿ ಯೂರಿಯಗೊಬ್ಬರ ಸರಬರಾಜು ಮಾಡಿದ್ದರೂ ಸದ್ಯದ ಸ್ಥಿತಿಯಲ್ಲಿ ಅಭಾವ ಕಾಣುತ್ತಿರುವ ಹಿನ್ನೆಲೆಯಲ್ಲಿ ಇಫ್ಕೋ ಕಂಪನಿವತಿಯಿಂದ ಇಫ್ಕೋ ನ್ಯಾನೋ ಡಿಎಪಿ ಬಗ್ಗೆ ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಗಿತ್ತು.

- Advertisement - 

ತಾಲ್ಲೂಕಿನ ಸಾಣಿಕೆರೆ ಗ್ರಾಮದ ಮಲ್ಲಿಕಾರ್ಜುನಪ್ಪ ಜಮೀನಿನಲ್ಲಿ ಡ್ರೋನ್ ಪ್ರಾತ್ಯಕ್ಷತೆ ಹಮ್ಮಿಕೊಳ್ಳಲಾಗಿದ್ದು ಕೃಷಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಉಮೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರು ಯೂರಿಯ ಗೊಬ್ಬರ ಬಳಕೆಯ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ.

ಆದರೆ ಇಫ್ಕೋ ಕಂಪನಿ ಪರ್ಯಾಯವಾಗಿ ನ್ಯಾನೋ ಡಿಎಪಿ ಬಳಕೆಯ ಬಗ್ಗೆ ಪ್ರಾತ್ಯಕ್ಷತೆಯನ್ನು ನೀಡುತ್ತಿದ್ದು ಇದು ರೈತರಿಗೆ ವರದಾನವಾಗಲಿದೆ ಎಂದರು.

- Advertisement - 

ಇಪ್ಕೋ ಕಂಪನಿ ವಲಯ ವ್ಯವಸ್ಥಾಪಕ ಚಿದಂಬರಮೂರ್ತಿ ಮಾತನಾಡಿ, ಸಾಕಷ್ಟು ರೈತರಿಗೆ ಮಾಹಿತಿ ನೀಡಿದರೂ ಸಹ ಯೂರಿಯ ಗೊಬ್ಬರಕ್ಕಾಗಿ ಭೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಇಲಾಖೆಯೊಂದಿಗೆ ಚರ್ಚೆ ನಡೆಸಿ ನಮ್ಮ ಕಂಪನಿಯ ಇಫ್ಕೋ ನ್ಯಾನೋ ಡಿಎಪಿ ಬಗ್ಗೆ ಪ್ರಾತ್ಯಕ್ಷತೆಯ ಮೂಲಕ ಮನದಟ್ಟು ಮಾಡಿಕೊಡಲಾಗುತ್ತದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್ ಮಾತನಾಡಿ, ಇಫ್ಕೋ ಕಂಪನಿಯ ನ್ಯಾನೋ ಡಿಎಪಿ ಬಳಕೆಯಿಂದ ರೈತರು ತಮ್ಮ ಬೆಳೆಗಳನ್ನು ಉತ್ತಮವಾಗಿ ಬೆಳಯಬಹುದಾಗಿದೆ. ಪ್ರತಿಯೊಬ್ಬರೂ ಯೂರಿಯ ಬಳಕೆಯನ್ನೇ ಆಧರಿಸಿರುವುದರಿಂದ ಇದರ ಬಳಕೆಗೆ ರೈತರು ಹಿಂದೇಟು ಹಾಕುತ್ತಿದ್ಧಾರೆ.

ಆದರೆ, ರಾಜ್ಯದ ವಿವಿಧ ಭಾಗದಲ್ಲಿ ಕಂಪನಿಯಿಂದ ಪ್ರಾತ್ಯಕ್ಷತೆ ನಡೆಸಿ ನ್ಯಾನೋ ಯೂರಿಯ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ರೈತ ಮಲ್ಲಿಕಾರ್ಜುನಪ್ಪ, ಎಒ ತಿಪ್ಪೇಸ್ವಾಮಿ ಸುತ್ತಮುತ್ತಲ ರೈತರು ಭಾಗವಹಿಸಿದ್ದರು.

Share This Article
error: Content is protected !!
";