ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರೇ ದೇಶದ ಜನರ ಕ್ಷಮೆ ಕೇಳಿ ಎಂದು ಜೆಡಿಸ್ ಆಗ್ರಹ ಮಾಡಿದೆ.
ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ಇತ್ತು ಎಂದು ಸಿದ್ದರಾಮಯ್ಯ ಸರ್ಕಾರದ ಚುನಾವಣಾ ಅಕ್ರಮ ಮತ್ತು ಲೋಪವನ್ನು ಸಹಕಾರ ಸಚಿವ ರಾಜಣ್ಣ ಒಪ್ಪಿಕೊಂಡಿದ್ದಾರೆ.
ಬಾದಾಮಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಅಕ್ರಮವಾಗಿಯೇ ಗೆದ್ದಿದ್ದು ಎಂದು ಅವರ ಆತ್ಯಾಪ್ತ ಇಬ್ರಾಹಿಂ ಬಹಿರಂಗವಾಗಿ ಸಾಕ್ಷ್ಯ ನುಡಿದಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ನಡೆಸಿರುವ ಚುನಾವಣಾ ಅಕ್ರಮಗಳಿಗೆ ಮೊದಲು ಕಾಂಗ್ರೆಸ್ಸಿಗರು ಕ್ಷಮೆ ಕೇಳಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.

