ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾದ ಸಚಿವರು

News Desk

ಚಂದ್ರವಳ್ಳಿ ನ್ಯೂಸ್, ವಿಧಾನ ಪರಿಷತ್:
ವಿಧಾನ ಪರಿಷತ್‌ ನಲ್ಲಿ ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪರವರು ವಿ.ಪರಿಷತ್ ಸದಸ್ಯರಾದ ಎಂ.ನಾಗರಾಜು ರವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಸುಮಾರು ವರ್ಷಗಳಿಂದ ತಾಂತ್ರಿಕ ದೋಷವಿದ್ದಂತಹ ಸಮಸ್ಯೆಯನ್ನು ನಿವಾರಣೆ ಮಾಡಿದ್ದು ಯಾವುದೇ ಪಡಿತರ ವಿತರಣೆಯಲ್ಲಿ ಸಮಸ್ಯೆ ಇಲ್ಲ ಎಂದರು.

ಕಪ್ಪು ಮಾರುಕಟ್ಟೆಯಲ್ಲಿ ಸರಕುಗಳ ಮಾರಾಟ ಇನ್ನಿತರೆ ಚಟುವಟಿಕೆಗಳು ನಡೆಯುತ್ತಿರುವ ಕುರಿತು 409 ಪ್ರಕರಣಗಳು ದಾಖಲಾಗಿದ್ದು 20 ಕೋಟಿಗೂ ಹೆಚ್ಚು ದಂಡವಿದಿಸಿದ್ದು ಈಗಾಗಲೇ 10 ಕೋಟಿ ರೂಗಳ ಮೊತ್ತದ ಹಣವನ್ನು ಸಂಗ್ರಹಿಸಲಾಗಿದೆ.

- Advertisement - 

ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಬಿಪಿಎಲ್ ಇರುವ ರಾಜ್ಯಗಳಲ್ಲಿ ನಮ್ಮ ರಾಜ್ಯವೆ ಮೊದಲಾಗಿದೆ ಸುಮಾರು 1.28 ಲಕ್ಷ ಕಾರ್ಡಗಳು ಬಿಪಿಎಲ್ ಆಗಿವೆ ನಮ್ಮ ರಾಜ್ಯ ಇಷ್ಟು ಮುಂದುವರೆದಿದ್ದರೂ ನಮ್ಮ ಲ್ಲಿ ಸುಮಾರು 1.28 ಲಕ್ಷ ಕಾರ್ಡಗಳು ಬಿಪಿಎಲ್ ಆಗಿದ್ದು ಇದು ಸಾಧ್ಯವೇ ಎಂದರು.

ತಮಿಳುನಾಡಿನಲ್ಲಿ ಶೇ50 ರಷ್ಟು ಬಿಪಿಎಲ್ ಕಾರ್ಡ್ ಗಳಿವೆ, ಕೇರಳದಲ್ಲಿ ಶೇ 45.%,ಆಂದ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಶೇ 50 ಬಿಪಿಎಲ್ ಕಾರ್ಡ್ ಗಳಿದ್ದು ನಮ್ಮ ರಾಜ್ಯದಲ್ಲಿ ಶೇ 75 ರಿಂದ 80 ರಷ್ಟು ಕಾರ್ಡ್ ಗಳಿರಲು ಸಾದ್ಯವೆ ಎಂದರು‌.

- Advertisement - 

ನಾನು ಕಳೆದ ವಿದಾನ ಸಭೆ ಅಧಿವೇಶನದ ಹಿಂದೆ ನಾನು ಪರಿಷ್ಕಣೆ ಮಾಡಲು ಕೈಗೆತ್ತಿಕೊಂಡಾಗ 15 ಲಕ್ಷ ಕಾರ್ಡ್‌ನ್ನು ಗುರುತಿಸಿ ಸುಮಾರು 50 ರಿಂದ 60 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಿದ್ದು ನಮ್ಮ ಅಧಿಕಾರಿಗಳು ಉತ್ತಮ‌ ಕೆಲಸ ಮಾಡಿದ್ದರು ಆದರೆ ನಮ್ಮ ಸದಸ್ಯರು ಗೊಂದಲಗಳನ್ನು ಸೃಷ್ಟಿಸಿದ ಕಾರಣ ಕೈ ಬಿಡಲಾಯಿತು.

ಪರಿಷ್ಕರಣೆ ಕಾರ್ಯ ನಡೆಸಲು ಕೇಂದ್ರ ಸರ್ಕಾರದ 12 ಮಾನದಂಡಗಳು ಹಾಗೂ ರಾಜ್ಯ ಸರ್ಕಾರದ 5 ಮಾನದಂಡಗಳ ಅನ್ವಯ ನಾವು ಪರಿಷ್ಕರಣೆಗೆ ಮುಂದಾಗಿದ್ದು ಎಲ್ಲಾ ಸದಸ್ಯರು ಸಹಕರಿಸಲು ಮನವಿ ಮಾಡಿದರು.

ಸರ್ವ ಸದಸ್ಯರ ಸಹಕಾರದಿಂದ ಮಾತ್ರ ಈ ಪರಿಕ್ಷರಣೆ ಕಾರ್ಯ ನಡೆಸಲು‌ ಸಾದ್ಯವಿರುವುದರಿಂದ ಇದರಲ್ಲಿ ಯಾವುದೇ ರಾಜಕಾರಣ ಬೆರಸಬಾರದು ಅನರ್ಹರನ್ನು ಗುರುತಿಸಿ ಅವರನ್ನು ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಾಯಿಸಿ ನಾವು ಅರ್ಹರಿಗೆ ಮಾತ್ರ ಈ ಸೌಲಭ್ಯಗಳನ್ನು ಕಲ್ಲಿಸಬೇಕು ಎಂದರು.

 

Share This Article
error: Content is protected !!
";