ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ಕರ್ನಾಟಕ ಕಾಂಗ್ರೆಸ್ ಸರ್ಕಾರ “ಬೆಂಗಳೂರನ್ನು ಯಾವ ರೀತಿ ಹಾಳು ಮಾಡಿಟ್ಟಿದೆ” ಎಂಬುದನ್ನು 5 ವರ್ಷದ ಬಾಲಕಿಗೆ ಅರ್ಥವಾಗಿದೆ ಎಂದು ಜೆಡಿಎಸ್ ಟಾಂಗ್ ನೀಡಿದೆ.
ಎರಡು ವರ್ಷ ಕಳೆದರೂ ನೀವು ಬೆಂಗಳೂರಿನ ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ. ಇದೇ ಕಾರಣಕ್ಕೆ ಶಾಲಾ ಬಾಲಕಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಬೆಂಗಳೂರಿನಲ್ಲಿ ರಸ್ತೆ ತುಂಬಾ ಕೆಟ್ಟದಾಗಿದೆ. ವಿಪರೀತ ಟ್ರಾಫಿಕ್ ಇದ್ದು ನಾವು ಶಾಲೆ ಹಾಗೂ ಕಚೇರಿಗಳಿಗೆ ತಡವಾಗಿ ತಲುಪುತ್ತಿದ್ದೇವೆ. ದಯಮಾಡಿ ಸಹಾಯ ಮಾಡಿ’ ಎಂದು ಅಳಲು ತೋಡಿಕೊಂಡಿದ್ದಾಳೆ.
ಇನ್ನಾದರೂ ಜಾಗತಿಕವಾಗಿ ಗುರುತಿಸಿಕೊಂಡಿರುವ ಬೆಂಗಳೂರು ನಗರದ ಅಭಿವೃದ್ಧಿಯ ಕಡೆ ಗಮನ ಹರಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.

