ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಈ ವರ್ಷ ಅವಧಿಗೂ ಮುನ್ನ ಸುರಿದ ಭಾರಿ ಮುಂಗಾರು ಮಳೆಯಿಂದ ತೆಂಗು, ಕಬ್ಬು, ಜೋಳ, ಹತ್ತಿ, ಕಾಫಿ, ಅಡಿಕೆ ಸೇರಿದಂತೆ ಅನೇಕ ಬೆಳೆಗಳಿಗೆ ಫಂಗಸ್ ಸೋಂಕು ತಗುಲಿರುವ ಅಘಾತಕಾರಿ ಅಂಶ ಪತ್ತೆಯಾಗಿದ್ದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ಎದುರಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಈ ಕೂಡಲೇ ಇದರ ಬಗ್ಗ ಗಮನ ಹರಿಸಿ ಸಾಧ್ಯವಾದ ಕಡೆ ರೈತರಿಗೆ ವೈಜ್ಞಾನಿಕ ನೆರವು ಒದಗಿಸಬೇಕು. ತಜ್ಞರ ಸಮಿತಿ ರಚಿಸಿ ರಾಜ್ಯಾದ್ಯಂತ ಸಮೀಕ್ಷೆ ನಡೆಸಿ ಬೆಳೆ ಹಾನಿ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹಾಗು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರನ್ನು ಅಶೋಕ್ ಒತ್ತಾಯಿಸಿದ್ದಾರೆ.

