ಮಾದಾರಶ್ರೀಗಳಿಗೆ ಉಪಚರಿಸಿ ಭಕ್ತಿ ಸಮರ್ಪಿಸಿದ ಮುಸ್ಲಿಂ ಸಮಾಜ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾಗಿರುವ ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಜಾತ್ಯಾತೀತ ಹಾಗೂ ಧರ್ಮಾತೀತ ತತ್ವಗಳನ್ನು ರೂಡಿಸಿಕೊಂಡು ಮುನ್ನಡೆಯುತ್ತಿದೆ.

ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಹೆಸರಿನಿಂದ ಜಾತಿ ಸೂಚಕವಾಗಿದ್ದರೂ ವಾಸ್ತವದಲ್ಲಿ ಸಕಲ ಜಾತಿ ಪಂಗಡಗಳ ಜನರನ್ನು ಸಮಾನವಾಗಿ ಕಾಣುವ ಶ್ರೀಗಳ ಸಮಾನತೆಯ ಭಾವ ಎಲ್ಲರನ್ನೂ ಪ್ರೀತಿಸುವ ಹಾಗೂ ಗೌರವಿಸುವ ಕಾರಣದಿಂದ ಶ್ರೀಮಠ ಸರ್ವರ ಶ್ರದ್ಧಾ ಕೇಂದ್ರವಾಗಿದೆ.

- Advertisement - 

ಇದಕ್ಕೊಂದು ತಾಜಾ ಉದಾಹರಣೆ ಮಂಗಳವಾರ ಶ್ರೀಗಳು ಹಾವೇರಿಯ ಮುಸ್ಲಿಂ ಸಮಾಜದ ಪಠಾಣ್ ಅವರ ನಿವಾಸಕ್ಕೆ ಭೇಟಿ ನೀಡಿ ಮುಸುಲ್ಮಾನ  ಬಂಧುಗಳೊಂದಿಗೆ ಮಾತುಕತೆ ನಡೆಸಿದರು.

ಪಠಾಣ್ ಅವರು ಹಲವು ವರ್ಷಗಳಿಂದ ಶ್ರೀಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರ ಭಕ್ತರಾಗಿದ್ದು ತಮ್ಮ ಮನೆಗೆ ಆಹ್ವಾನಿಸಿ ಉಪಚರಿಸಿ, ಭಕ್ತಿ ಸಮರ್ಪಿಸಿದರು.

- Advertisement - 

 

Share This Article
error: Content is protected !!
";