ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಟೌನ್ ವೇದಾವತಿ ನಗರದ 3 ನೇ ವಾರ್ಡ್ ಶಿವಶಂಕರಪ್ಪ ಲೇ ಔಟ್ ಮತ್ತು ಚಂದ್ರಾ ಲೇ ಔಟ್ ನಲ್ಲಿ ಉದ್ಯಾನವನ ಜಾಗವನ್ನು ಕಬಳಿಸುವ ಯತ್ನ ಮಾಡಲಾಗಿದ್ದು ಕಬಳಿಕೆದಾರರ ವಿರುದ್ಧ ಹಿರಿಯೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಎ.ವಾಸೀಂ ತಿಳಿಸಿದ್ದಾರೆ.
ಬಬ್ಬೂರ್ ಸರ್ವೇ ನಂಬರ್ 39 ಮತ್ತು 40 ರಲ್ಲಿ ನಗರ ಯೋಜನೆ ಅನುಮೋದಿತ ನಕ್ಷೆಗಳ ಪ್ರಕಾರ 2 ಪಾರ್ಕ್ ಜಾಗಗಳ ಭೂ ಕಬಳಿಕೆ ತಡೆಯಲು ಏನು ಕ್ರಮ ಕೈಗೊಳ್ಳಲಾಗಿದೆ?, ಹಿರಿಯೂರು ನಗರಸಭೆ ವ್ಯಾಪ್ತಿಯ ಈ 2 ಬಡಾವಣೆ ಪಾರ್ಕ್ ಜಾಗ ಕಬಳಿಕೆ ಮಾಡಲು ನಕಲಿ ನಕ್ಷೆ ತಯಾರಿಸಿ ಇ -ಸ್ವತ್ತು ಮಾಡಿಸಿದವರು ಮತ್ತು ಮಾಡಿ ಕೊಟ್ಟವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಏಕೆ ದೂರು ಕೊಟ್ಟಿಲ್ಲ?, ದಿನಾಂಕ 12 -08 -2025 ರಂದು ನಗರಸಭೆ AEE ಶ್ರೀರಂಗಪ್ಪ ಮತ್ತು RO ಜಬೀವುಲ್ಲಾ ರವರು ಪಾರ್ಕ್ ಜಾಗಕ್ಕೆ ನಗರಸಭೆ ಉದ್ಯಾನವನ ನಾಮಫಲಕ ಹಾಕಿಸಿ GPS ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ
ಮರು ದಿನವೇ ಸರ್ವೆ ನಂಬರ್ 39 ರ ಬಡಾವಣೆ ಮಾಲೀಕ ಶಿವಶಂಕರಪ್ಪ ಮತ್ತು ಇವರ ಮಗ ಶ್ರೀಧರ JCB ತಂದು ಸರ್ಕಾರಿ ಜಾಗದಲ್ಲಿ ಇರುವ ಸರ್ಕಾರದ ಆಸ್ತಿಗೆ ಹಾನಿ ಮಾಡಿ ಬೋರ್ಡನ್ನು ಕಿತ್ತು ಅವರ ಮನೆಗೆ ಹೊತ್ತುಕೊಂಡು ಹೋಗಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಏಕೆ ದೂರು ಕೊಟ್ಟಿಲ್ಲ? ಎಂದು ಸಾರ್ವಜನಿಕರು ಪೌರಾಯುಕ್ತರಿಗೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಪೌರಾಯುಕ್ತ ವಾಸೀಂ ಅವರು ಸದರಿ ವ್ಯಕ್ತಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲು ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

