ಅವಶೇಷಗಳಡಿ ಸಿಲುಕಿದ್ದ ವೃದ್ಧ ದಂಪತಿಗಳ ರಕ್ಷಿಸಿದ ಅಗ್ನಿಶಾಮಕದಳ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಭಾರೀ ಮಳೆಯಿಂದಾಗಿ ಮನೆಯೊಂದು ಕುಸಿದು ಬಿದ್ದಿದ್ದು ಅವಶೇಷಗಳಡಿ ಸಿಲುಕಿದ ವೃದ್ಧ ದಂಪತಿಯನ್ನು ರಕ್ಷಣೆ ಮಾಡಿರುವ ಘಟನೆ ಮೆಹಬೂಬ್ ನಗರದಲ್ಲಿ ನಡೆದಿದೆ.

ಅವಶೇಷಗಳಡಿ ಸಿಲುಕಿದ್ದ ವೃದ್ಧ ದಂಪತಿಗಳಾದ ಶೇಖ್ ಬುಡೇನ್ ಸಾಬ್ (85), ನೂರ್ ಜಹಾನ್ (76) ಇವರನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.

- Advertisement - 

ಶುಕ್ರವಾರ ಬೆಳಗಿನ ಜಾವ 04 ಗಂಟೆಗೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ನಾಲ್ಕೈದು ದಿನಗಳಿಂದ ತುಂತುರು ಮಳೆ ಆಗುತ್ತಿರುವ ಹಿನ್ನೆಲೆ ವೃದ್ಧ ದಂಪತಿ ವಾಸಿಸುತ್ತಿದ್ದ ಇಡೀ ಮನೆ ತೇವಾಂಶಗೊಂಡು ಕುಸಿದು ಬಿದ್ದಿದೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ವೃದ್ಧ ದಂಪತಿ ಶೇಕ್ ಬುಡೇನ್ ಸಾಬ್, ನೂರ್ ಜಹಾನ್ ಅವರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement - 

ವೃದ್ಧ ದಂಪತಿ ರಕ್ಷಣೆಗೆ ಸ್ಥಳೀಯರು ಕೈ ಜೋಡಿಸಿದ್ದು, ಹಿರಿಜೀವಗಳು ನಿಟ್ಟುಸಿರು ಬಿಟ್ಟಿವೆ. ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಇಬ್ಬರೇ ವೃದ್ಧ ದಂಪತಿ ವಾಸಿಸುತ್ತಿದ್ದು, ಮನೆ ಕುಸಿದಾಗ ಹೊರಬರಲಾಗದೆ ಅವಶೇಷಗಳಡಿ ಸಿಲುಕಿದ್ದರು.

 ಬೆಳಗಿನ ಜಾವ ಘಟನೆ ನಡೆದಿದ್ದರಿಂದಾಗಿ ಕತ್ತಲು ಆವರಿಸಿತ್ತು. ಮನೆ ಬಿದ್ದು ಎಷ್ಟೋ ಹೊತ್ತಿನ ಬಳಿಕ ಸ್ಥಳೀಯರ ಗಮನಕ್ಕೆ ಬಂದಿದೆ. ಆಗ ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಸ್ಥಳೀಯರು ವೃದ್ಧ ದಂಪತಿ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

ವೃದ್ಧ ದಂಪತಿಯ ಮೊಮ್ಮಗ ಸಾದಾತ್ ಪ್ರತಿಕ್ರಿಯಿಸಿ, ಬೆಳಗಿನ ಜಾವ ನಾಲ್ಕು ಗಂಟೆಗೆ ಈ ಘಟನೆ ನಡೆದಿದೆ. ಮನೆ ಬಿದ್ದಿದೆ, ಶೇಕ್ ಬುಡೇನ್ ಸಾಬ್, ಅಜ್ಜಿ ನೂರ್ ಜಹಾನ್ ಇಬ್ಬರು ಮನೆ ಅವಶೇಷಗಳಡಿಯಲ್ಲಿ ಸಿಲುಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವೃದ್ಧ ದಂಪತಿ ರಕ್ಷಣೆ ಮಾಡಿದ್ದಾರೆ, ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

 

 

Share This Article
error: Content is protected !!
";