ಹಂದಿಗಳ ಹಾವಳಿ ತಡೆಗೆ ಮುಂದಾದ ನಗರಸಭೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರಸಭೆ ಆಡಳಿತ ಹಂದಿ ಸ್ಥಳಾಂತರಕ್ಕೆ ಹಲವು ದಿನಗಳ ಗಡುವು ನೀಡಿತ್ತು. ಆದರೆ ಹಂದಿಗಳ ಮಾಲೀಕರು ಸ್ಥಳಾಂತರ ಮಾಡದೆ ನಿರ್ಲಕ್ಷ್ಯ ಮಾಡಿದ್ದರಿಂದ ಮತ್ತು ನಗರಸಭೆ ನೀಡಿದ್ದ ಗಡುವು ಮುಕ್ತಾಯವಾದ ಕಾರಣ ನಗರಸಭೆಯೇ ಹಂದಿ ಹಿಡಿಯುವ ಕಾರ್ಯಾಚರಣೆಗೆ ಇಳಿದಿದೆ.

ಹಿರಿಯೂರು ನಗರ ವ್ಯಾಪ್ತಿಯಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿರುವ ಕಾರಣ ಈಗಾಗಲೇ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಹಾಗೂ ಪೌರಾಯುಕ್ತರು ಮತ್ತು ಸದಸ್ಯರುಗಳ ಸಮ್ಮುಖದಲ್ಲಿ ಹಂದಿ ಮಾಲೀಕರಿಗೆ ಹಲವಾರು ಬಾರಿ ಸಭೆ ಆಯೋಜಿಸಿ ಅಂತಿಮವಾಗಿ ಕಳೆದ ಆಗಸ್ಟ್-11 ರಂದು ಕೌನ್ಸಿಲ್ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು.

- Advertisement - 

ಸಭೆಯ ನಂತರವೂ 3 ದಿನಗಳ ಕಾಲವಕಾಶ ನೀಡಿ ನೋಟಿಸ್ ಜಾರಿಮಾಡಲಾಗಿತ್ತು. ಆದರೆ ಈ ನೋಟಿಸ್ ಗೂ ಹಂದಿಗಳ ಮಾಲೀಕರ ಕ್ಯಾರೇ ಎನ್ನಲಿಲ್ಲ.

ಹಂದಿಗಳನ್ನು ನಗರ ಪ್ರದೇಶದಿಂದ ಹೊರಗಡೆ ಸಾಕಾಣಿಕೆ ಮಾಡಿಕೊಳ್ಳದೆ ನಗರದ ಬೀದಿ ಬೀದಿಗಳಲ್ಲಿ ಬೀಡಾಡಿ ಹಂದಿಗಳು ಮೊದಲಿನಂತೆ ಒಡಾಡುತ್ತಿರುವುದು ಕಂಡುಬಂದಿರುವುದರಿಂದ ಶನಿವಾರ ಬೀಡಾಡಿ ಹಂದಿಗಳನ್ನು ಹಿಡಿಸಿ ನಗರ ಪ್ರದೇಶದಿಂದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ನಗರಸಭೆ ಕ್ರಮವಹಿಸಿದೆ.

- Advertisement - 

ಮಾಲೀಕರು ನಗರದಾಚೆಗೆ ಹಂದಿಗಳನ್ನು ಸಾಗಿಸಲು ಮೀನಾಮೇಷ ಎಣಿಸಿದ್ದರು. ಅನಿವಾರ್ಯವಾಗಿ ನಗರಸಭೆ ಹಂದಿಗಳನ್ನು ಹಿಡಿಯಲು ಕಾರ್ಯಾಚರಣೆ ಮಾಡಿ 20ಕ್ಕೂ ಹೆಚ್ಚಿನ ಹಂದಿಗಳನ್ನು ಹಿಡಿಯಲಾಯಿತು. ನಗರದಿಂದ 25 ಕಿಲೋ ಮೀಟರ್ ದೂರಕ್ಕೆ ಸಾಗಿಸುತ್ತೇವೆ.

ಇದರ ಮಧ್ಯ ಹಂದಿಗಳ ಮಾಲೀಕರು ಆಗಮಿಸಿ ನಗರದಿಂದ ದೂರ ಸಾಗಾಣಿಕೆ ಮಾಡುತ್ತೇವೆಂದು ಮನವಿ ಮಾಡಿಕೊಂಡಿದ್ದರಿಂದ ಮುಂದಿನ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ ಮಾಡಿದ್ದು ಅದೇ ಚಾಳಿ ಮುಂದುವರೆಸಿದರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಎಂ.ವಾಸೀಂ, ಪೌರಾಯುಕ್ತರು, ನಗರಸಭೆ, ಹಿರಿಯೂರು.

 

 

 

 

 

Share This Article
error: Content is protected !!
";