ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಿಸ್ಟರ್ ಹೋಮ್ ಮಿನಿಸ್ಟರ್ ಡಾ.ಜಿ ಪರಮೇಶ್ವರ್, ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಮೊದಲು ಗಮನ ಹರಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.
ನಿಮ್ಮ ಧಮ್ಕಿ , ವಾರ್ನಿಂಗ್ ರಾಹುಲ್ ಗಾಂಧಿ ಮುಂದೆ ಹಾಕಿ. ಆಡಳಿತಾರೂಢ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾಡುವ ತಪ್ಪುಗಳನ್ನು ಹುಡುಕುವುದು ಮತ್ತು ಆ ತಪ್ಪುಗಳನ್ನು ಪ್ರಶ್ನಿಸುವುದು ಮಾಧ್ಯಮಗಳ ಸ್ವಾತಂತ್ರ್ಯ.
ಗೃಹ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಲಾಗದ ನೀವು ಮಂತ್ರಿಯಾಗಿ ರೌಡಿಯಂತೆ ಧಮ್ಕಿ ಹಾಕಿ, ವಾರ್ನಿಂಗ್ ಕೊಟ್ಟು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಯತ್ನಿಸುವ ಕಾಂಗ್ರೆಸ್ ಸರ್ಕಾರದ ಹೇಡಿತನದ ಲಕ್ಷಣ ಎಂದು ಜೆಡಿಎಸ್ ಹರಿಹಾಯ್ದಿದೆ.
ಅಂದು ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕಿದ್ದರು. ಈಗ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರುವ ಲಕ್ಷಣಗಳು ನಿಮ್ಮ ಮಾತುಗಳಿಂದ ಸ್ಪಷ್ಟವಾಗುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.

