ಸ್ತನ್ಯಪಾನದಿಂದ ಮಗುವಿನ ಆರೋಗ್ಯ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಳ- ಡಾ.ಗೋಪಿಕಾ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸ್ತನ್ಯಪಾನದಿಂದ ಮಗುವಿನ ಆರೋಗ್ಯ ಉತ್ತಮವಾಗಿರುವುದಲ್ಲದೇ
, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ. ಗೋಪಿಕಾ ತಿಳಿಸಿದರು.

  ದೊಡ್ಡಬಳ್ಳಾಪುರ  ತಾಲೂಕಿನ ಲಕ್ಷ್ಮೀದೇವಿಪುರ ಗ್ರಾಮದಲ್ಲಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಡೆದ ವಿಶ್ವಸ್ತನ್ಯಪಾನ ಸಪ್ತಾಹದಲ್ಲಿ ಮಾತನಾಡಿದರು.

- Advertisement - 

ವಿಶ್ವಾದ್ಯಂತ ಪ್ರತಿ ವರ್ಷ ಆಗಸ್ಟ್ ಮೊದಲನೇ ವಾರವನ್ನು ಸ್ತನ್ಯಪಾನ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದ್ದು, ಬಾಣಂತಿ ಯರ ಆರೈಕೆ ಮಹತ್ವ ಮತ್ತು ನವಜಾತ ಶಿಶುಗಳಲ್ಲಿ ಸ್ತನಪಾನದ ಮಹತ್ವದ್ದಾಗಿದೆ ಎಂದರು. ನವಜಾತ ಶಿಶುಗಳಿಗೆ ಮೊದಲ ಆರು ತಿಂಗಳವರೆಗೂ ಯಾವುದೇ ಇತರೆ ಆಹಾರ ನೀಡದೇ, ಕೇವಲ ತಾಯಿಯ ಎದೆಹಾಲು ಮಾತ್ರ ನೀಡಬೇಕು ಮತ್ತು ಎರಡು ವರ್ಷಗಳವರೆಗೂ ಸ್ತನ್ಯ ಪಾನ ಮುಂದುವರಿಸಬೇಕು.

ಜತೆಗೆ ಕೆಲಸಕ್ಕೆ ಹೋಗುವ ತಾಯಂದಿರು ತಮ್ಮ ಮಗುವಿಗೆ ನನ್ನಪಾನದ ಜತೆಗೆ ಇತರೆ ಪೂರಕ ಆಹಾರ ಕೊಡುವಾಗ ಮಕ್ಕಳು  “ಅಹಾರದ ಬಗ್ಗೆ ಅರಿವಿರಬೇಕು. ಸ್ವಚ್ಛತೆ ಬಗ್ಗೆ ಗಮನ ಹರಿಸಿ, ತಮ್ಮ ಮನೆ ಇತರೆ ಸದಸ್ಯರಿಗೂ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಲಕ್ಷ್ಮೀದೇವಿಪುರ ಗ್ರಾಮದ ಅಂಗನವಾಡಿ ಶಿಕ್ಷಕಿ ಗಾಯಿತ್ರಿ, ಫಲಾನುಭವಿ  ಗ್ರಾಮದ  ಮಹಿಳೆಯರು  ಹಾಜರಿದ್ದರು.

- Advertisement - 

 

Share This Article
error: Content is protected !!
";