ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕು ತಾಳಿಕಟ್ಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಭೀಕ್ಷೆ ಬೇಡಿಕೊಂಡು ಇದ್ದ, ಸುಮಾರು 60 ರಿಂದ 65 ವರ್ಷ ವಯಸ್ಸಿನ ಅನಾಮಧೇಯ ವೃದ್ಧೆ ಮೃತಪ್ಪಟ್ಟ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತಪಟ್ಟ ವೃದ್ಧೆ 5.3 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಣಕಲು ಮೈಕಟ್ಟು ಹೊಂದಿದ್ದಾರೆ. ಎದೆಯ ಬಲಭಾಗದಲ್ಲಿ ಸಣ್ಣ ಮಚ್ಚೆ ಹಾಗೂ ತಲೆಯಲ್ಲಿ ಐದು ಇಂಚು ಕಪ್ಪು, ಕೆಂಪು ಮಿಶ್ರಿತ ಬಿಳಿ ಕೂದಲು ಇರುತ್ತದೆ. ಮೃತಪಟ್ಟ ಸಂದರ್ಭದಲ್ಲಿ ಕೆಂಪು, ಹಳದಿ ಮತ್ತು ಹಸಿರು ಕಲ್ಲರ್ ಚುಕ್ಕಿಗಳ್ಳುಳ್ಳ ಸ್ವಟರ್, ಹಳದಿ ಬಣ್ಣ ರವಿಕೆ, ಕಾಫಿ ಬಣ್ಣದ ಲಂಗ ಧರಿಸಿರುತ್ತಾರೆ, ಕುತ್ತಿಗೆಯಲ್ಲಿ ಬಿಳಿ ಮತ್ತು ಕೆಂಪು ಕಲರ್ ಮಣಿಯ ಸರ ಇದ್ದು, ಕೈಯಲ್ಲಿ ಹಸಿರು ಬಳೆ ಧರಿಸಿರುತ್ತಾರೆ. ಶವವನ್ನು ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ಮೃತರ ಗುರುತು ಪತ್ತೆಯಾದವರು, ಹೊಳಲ್ಕೆರೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08191-275233, 9480803151, ಹೊಳಲ್ಕೆರೆ ವೃತ್ತ ನಿರೀಕ್ಷಕರ ಕಛೇರಿ ಸಂಖ್ಯೆ 08191-275376, 9480803135, ಚಿತ್ರದುರ್ಗ ಪೊಲೀಸ್ ಉಪಧೀಕ್ಷಕ ಕಛೇರಿ ಸಂಖ್ಯೆ 08194-2224304, ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ 08194-222782 ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

