ಮಾದಕ ಪದಾರ್ಥ ಮಾರುತ್ತಿದ್ದ ಇಬ್ಬರು ವಿದೇಶಿ ಆರೋಪಿಗಳ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾದಕ ಪದಾರ್ಥ ಮಾರಾಟ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನ ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಫ್ರಿಕಾ ಮೂಲದ ಜೋಯಲ್ ಕಾಬೊಂಗ್ ಹಾಗೂ ಆತನ ಸ್ನೇಹಿತೆ ಜೋಯ್ ಸಂಡೆ ಅವರು ವಿದ್ಯಾರ್ಥಿ ವೀಸಾದಡಿ ಆಗಮಿಸಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದು ಪೊಲೀಸರು ಇಬ್ಬರನ್ನೂ ಬಂಧಿಸಿ ಬರೋಬ್ಬರಿ 5 ಕೋಟಿ ರೂ ಮೌಲ್ಯದ 2 ಕೆಜಿ 150 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್ಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

- Advertisement - 

ಕಳೆದ 12 ವರ್ಷಗಳ ಹಿಂದೆ ಆರೋಪಿ ಜೋಯಲ್ ಕಾಬೊಂಗ್ ಸ್ಟೂಡೆಂಟ್ ವೀಸಾದಡಿ ಭಾರತಕ್ಕೆ ಬಂದಿದ್ದ. ಜೋಯ್ ಸಂಡೆ ಸಹ ಸ್ಟೂಡೆಂಟ್ ವೀಸಾ ಪಡೆದು 3 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಳು. ಇಬ್ಬರ ವೀಸಾ ಅವಧಿ ಅಂತ್ಯವಾದ ಬಳಿಕವೂ ಭಾರತದಲ್ಲಿ ಉಳಿದುಕೊಂಡು ಮಾದಕ ಪದಾರ್ಥಗಳ ಮಾರಾಟ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಆಗಸ್ಟ್ 15ರಂದು ಬೆಟ್ಟದಾಸನಪುರ ಬಳಿ ಗಿರಾಕಿಗಳಿಗೆ ಎಂಡಿಎಂಎ ಮಾರಾಟ ಮಾಡಲು ನಿಂತಿದ್ದ ಜೋಯಲ್ ಕಾಬೊಂಗ್‍ನನ್ನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದರು.

- Advertisement - 

ಬಳಿಕ ಆತ ನೀಡಿದ ಮಾಹಿತಿ ಆಧರಿಸಿ ಅದೇ ದಿನ ಆತನ ಸ್ನೇಹಿತೆ ಜೋಯ್ ಸಂಡೆಯನ್ನ ಬಂಧಿಸಿದ್ದರು. ಆರೋಪಿಗಳಿಗೆ ಕಡಿಮೆ ಬೆಲೆಗೆ ಎಂಡಿಎಂಎ ಸರಬರಾಜು ಮಾಡುತ್ತಿದ್ದ ಮತ್ತೊರ್ವ ಆರೋಪಿ ದೆಹಲಿಗೆ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Share This Article
error: Content is protected !!
";