ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಟಿಎ ಶರವಣ ವತಿಯಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಿಗೆ ಅಚ್ಚಿನ ಬೆಳ್ಳಿ ಲೋಹದ ಮೇಲೆ ಬಂಗಾರದ ಲೇಪನ ಹಾಕಿ ಸಿದ್ದಪಡಿಸಿರುವ ಕರ್ನಾಟಕ ಸರ್ಕಾರದ ಲಾಂಛನ ಗುರುತಿನ ಗಂಡಬೇರುಂಡವನ್ನು ಮಂಗಳವಾರ ವಿತರಣೆ ಮಾಡಿದರು.
ಶರವಣ ಎಂಎಲ್ಸಿಗಳಿಗೆ ಲಾಂಛನ ಸಿದ್ದಪಡಿಸಿದ್ದಾರೆ. ಅವರ ವ್ಯಾಪಾರದಲ್ಲಿ ಶ್ರಮ ಪಟ್ಟು ಗಳಿಸಿದ್ದಾರೆ. ಅದರಲ್ಲಿ ಲಾಂಛನ ಸಿದ್ಧಪಡಿಸಿ ನಮ್ಮೆಲ್ಲರಿಗೂ ತಂದುಕೊಟ್ಟಿದ್ದಾರೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದರು.

