ಬಸವ ತತ್ವವನ್ನು ಜನಮನದಲ್ಲಿ ಮತ್ತಷ್ಟು ಗಾಢವಾಗಿ ಬಿತ್ತಲು ಸಹಕಾರಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಸವತತ್ವದ ಬೆಳಕಿನಲಿ ನವಕರ್ನಾಟಕ ಬಸವ ಸಂಸ್ಕೃತಿ ಅಭಿಯಾನ: ಐತಿಹಾಸಿಕಗೊಳಿಸಲು ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಯಿತು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಘೋಷಣೆಗೆ 1ವರ್ಷ ಗತಿಸಿರುವ ಹಿನ್ನಲೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಸೆ.1ರಿಂದ ಅ.1ರವರೆಗೆ `ಬಸವ ಸಂಸ್ಕೃತಿ ಅಭಿಯಾನಹಮ್ಮಿಕೊಳ್ಳಲಾಗಿದೆ.

- Advertisement - 

ಸಮಾರೋಪ ಸಮಾರಂಭವು ಅ.5ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಎಲ್ಲೆಡೆಯಿಂದ ಬಸವಣ್ಣನ ಸಾವಿರಾರು ಅನುಯಾಯಿಗಳು ಪಾಲ್ಗೊಳ್ಳಲಿದ್ದಾರೆ.

ಈ ನಿಮಿತ್ತ ಗದಗ ಪೂಜ್ಯ ತೋಂಟದಾರ್ಯ ಡಾ. ಸಿದ್ದರಾಮ ಮಹಾಸ್ವಾಮಿಗಳು ಹಾಗೂ ವಿವಿಧ ಮಠಗಳ ಪೂಜ್ಯ ಗುರು-ಹಿರಿಯರದೊಂಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದೆ. ಈ ಕಾರ್ಯಕ್ರಮವನ್ನು ಐತಿಹಾಸಿಕಗೊಳಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.

- Advertisement - 

ಸಾಣೆಹಳ್ಳಿ ಶ್ರೀಮಠದ ಪೂಜ್ಯ ಗುರುಗಳಾದ  ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ  ಪರಮ ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿ, ಬಸವ ಧರ್ಮ ಪೀಠದ ಬಸವ ಯೋಗಿ ಸ್ವಾಮಿಗಳು,

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಎಸ್. ಎಂ. ಜಾಮಾದಾರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಸೇರಿದಂತೆ ಸಮಾಜದ ಹಿರಿಯರು, ಮುಖಂಡರುಗಳು ಇಂದಿನ ಸಭೆಯಲ್ಲಿ ಉಪಸ್ಥಿತರಿದ್ದು, ತಮ್ಮ ಚಿಂತನೆಗಳನ್ನು ಹಂಚಿಕೊಂಡರು.

ಈ ಅಭಿಯಾನವು ಬಸವ ತತ್ವವನ್ನು ಜನಮನದಲ್ಲಿ ಮತ್ತಷ್ಟು ಗಾಢವಾಗಿ ಬಿತ್ತಲು ಸಹಕಾರಿಯಾಗಲಿದೆ ಎಂದು ಎಂ.ಬಿ ಪಾಟೀಲ್ ಅಭಿಪ್ರಾಯಪಟ್ಟರು.

 

Share This Article
error: Content is protected !!
";