ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಯೋಜನೆಯಡಿ ತಾಲೂಕಿನ ರೈತರಿಗೆ ಸಾಕಾಣಿಕೆ ಮಾಡಲು 1000 ಹಸುಗಳನ್ನು ಕೊಡಿಸಿಕೊಡಬೇಕೆಂದು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕಂದಿಕೆರೆ ಜಗದೀಶ್ ಕೃಷಿ ಸಚಿವ ಚಲುವರಾಯಸ್ವಾಮಿಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಹಿರಿಯೂರು ತಾಲೂಕು ಕೃಷಿ ಪ್ರಧಾನವಾದ ತಾಲೂಕು ಆಗಿದ್ದು ಇಲ್ಲಿ ಹೈನುಗಾರಿಕೆಗೆ ರೈತರು ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಇದರ ರೈತರ ಆರ್ಥಿಕ ಸ್ಥಿತಿ ಕೂಡ ಸುಧಾರಿಸುತ್ತಿದೆ. ಮತ್ತಷ್ಟು ರೈತರಿಗೆ ಇದರ ಉಪಯೋಗ ಆಗಬೇಕಾದರೆ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಯೋಜನೆ
( ಮಳೆಯಾಶ್ರಿತ ಪ್ರದೇಶ ಅಭಿವೃದ್ಧಿ )ಯಡಿ ಕೃಷಿ ಉತ್ಪಾದನಾ ಕೇಂದ್ರದ ಸದಸ್ಯತ್ವ ಹೊಂದಿರುವ ಸಾವಿರ ರೈತರಿಗೆ ಹಸು ಸಾಕಾಣಿಕೆ ಮಾಡಲು 250 ಲಕ್ಷ ರೂ. ಅನುದಾನ ಮಂಜೂರು ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರಲ್ಲಿ ಕಂದಿಕೆರೆ ಜಗದೀಶ್ ಮನವಿ ಮಾಡಿದ್ದಾರೆ.

