ಕ್ಯಾಸಿನೋ ದಂಧೆಕೋರ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯ ಕೋಟಿ ಕೋಟಿ ಆಸ್ತಿ ಪತ್ತೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ “ಕ್ಯಾಸಿನೋ ದಂಧೆಕೋರ” ಕರ್ನಾಟಕ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.

ನೂರಾರು ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಸಂಬಂಧ ಚಿತ್ರದುರ್ಗ ಕ್ಷೇತ್ರದ ಶಾಸಕ ವೀರೇಂದ್ರ ಅವರಿಗೆ ಸೇರಿದ ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ ಜೋಧಪುರ, ಮುಂಬೈ ಮತ್ತು ಗೋವಾ ಸೇರಿ ಒಟ್ಟು 31 ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement - 

ದಾಳಿ ಸಂದರ್ಭದಲ್ಲಿ 12 ಕೋಟಿ ರೂ. ನಗದು, 1 ಕೋಟಿ ರೂ. ವಿದೇಶಿ ಕರೆನ್ಸಿ, 6 ಕೋಟಿ ಮೌಲ್ಯದ ಚಿನ್ನಾಭರಣ, 10 ಕೆ.ಜಿ. ಬೆಳ್ಳಿ ಆಭರಣಗಳು, 2 ಲಾಕರ್‌, 17 ಬ್ಯಾಂಕ್‌ಅಕೌಂಟ್‌ಜಪ್ತಿ, 4 ಐಷಾರಾಮಿ ಕಾರು, ಆಸ್ತಿ ಪತ್ರಗಳು ವಶಕ್ಕೆ ಪಡೆಯಲಾಗಿದೆ.

ಕ್ಯಾಸಿನೋ, ಆನ್‌ಲೈನ್‌ಗೇಮಿಂಗ್‌, ಹವಾಲಾ ಮೂಲಕ ಅಡ್ಡದಾರಿಯಲ್ಲಿ ನೂರಾರು ಕೋಟಿ ರೂ. ಲೂಟಿಹೊಡೆದಿರುವ ಆಡಳಿತ ಪಕ್ಷದ ಕಾಂಗ್ರೆಸ್‌ಶಾಸಕನ ಬಂಧನವಾಗಿದ್ದು, ಸದ್ಯದಲ್ಲೇ ತನಿಖೆಯಿಂದ ಮತ್ತಷ್ಟು ಕಾಂಗ್ರೆಸ್‌ಮಹಾನಾಯಕರ ಮುಖವಾಡಗಳು ಕಳಚಿ ಬೀಳಲಿದೆ.

- Advertisement - 

ಕೇಂದ್ರದ #NDA ಸರ್ಕಾರ “ಆನ್‌ಲೈನ್‌ಬೆಟ್ಟಿಂಗ್‌ಮತ್ತು ಜೂಜು ನಿಯಂತ್ರಣ” ಕಾಯ್ದೆ ಜಾರಿಗೊಳಿಸಿದ್ದಕ್ಕೆ ರಾಜ್ಯದ ಸಚಿವರೊಬ್ಬರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು, ಈಗ ಅದು ಕಾಂಗ್ರೆಸ್‌ಶಾಸಕರ ಬುಡಕ್ಕೆ ಬಂದಿದೆ ಎಂದು ಜೆಡಿಎಸ್ ಟೀಕಿಸಿದೆ.

 

Share This Article
error: Content is protected !!
";