ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಬೋಗಸ್‌ಗ್ರೇಟರ್‌ಬೆಂಗಳೂರು” ಪಿತಾಮಹ ಡಿ.ಕೆ ಶಿವಕುಮಾರ್ ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆಯನ್ನು ನಿರ್ವಹಣೆ ಮಾಡುವಲ್ಲಿ ನಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ವಿಧಾನಸಭೆಯಲ್ಲಿ ಕೊನೆಗೂ ಸತ್ಯವನ್ನು ಒಪ್ಪಿಕೊಂಡಿದ್ದೀರಿ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ಸರ್ಕಾರದ ದುಡ್ಡಲ್ಲಿ ಚೆನ್ನೈ, ದೆಹಲಿ ಹಾಗೂ ಹೈದ್ರಾಬಾದ್‌ನಗರಗಳಲ್ಲಿ ಜಾಲಿ ಟ್ರಿಪ್‌ಮಾಡಿ, ಕಸದ ಸಮಸ್ಯೆ ಬಗೆಹರಿಸುತ್ತೇನೆ ಎಂದು ಉದ್ದುದ್ದ ಭಾಷಣ ಬಿಗಿದಿದ್ದು ಬಿಟ್ಟರೇ ಫಲಿತಾಂಶ ಮಾತ್ರ ಶೂನ್ಯ.
ಕಾಂಗ್ರೆಸ್‌ಸರ್ಕಾರ ಯಾವುದೇ ದೂರದೃಷ್ಟಿ ಇಲ್ಲದೇ ಕೇವಲ “ಕಾಂಗ್ರೆಸ್‌ಫಂಡ್‌ಗಾಗಿ” ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ಬೋಗಸ್‌ಯೋಜನೆಗಳನ್ನು ಘೋಷಿಸಿ ಹಣ ಲೂಟಿ ಹೊಡೆಯುತ್ತಿರುವುದು ಸಷ್ಟ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.

