ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಕಾರ್ಖಾನೆಗಳು ಕೈಗಾರಿಕಾ ಪ್ರದೇಶ ಹೊಂದಿದರು ದೊಡ್ಡಬಳ್ಳಾಪುರ ನಗರಸಭೆಯ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ಸಾರ್ವಜನಿಕರು ಸಮಸ್ಯೆಯಲ್ಲಿ ಕಾಲಕಳೆಯುವ ಪರಿಸ್ಥಿತಿ ಎದುರಾಗಿದೆ ಎಂದು ಕನ್ನಡ ಜಾಗೃತಿ ವೇದಿಕೆ ದೊಡ್ಡಬಳ್ಳಾಪುರ ತಾಲೂಕು ಮತ್ತು ಜಿಲ್ಲಾ ಘಟಕದ ವತಿಯಿಂದ ನಗರಸಭೆಯ ಪೌರಾಯುಕ್ತರಿಗೆ ನಗರದ ಹಲವಾರು ಸಮಸ್ಯೆಗಳನ್ನು ಕೂಡಲೆ ಬಗೆಹರಿಸುವಂತೆ ಮನವಿ ಸಲ್ಲಿಸಲಾಯಿತು.
ಈ ಕುರಿತು ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಂ ನಾಗರಾಜ್ ಮಾತನಾಡಿ ದೊಡ್ಡಬಳ್ಳಾಪುರಕ್ಕೆ ಯಾವುದೇ ಸೌಕರ್ಯಗಳನ್ನು ಪಡೆಯಬೇಕಾದರೆ ಹೋರಾಟಗಳ ಮುಖಾಂತರ ಪಡೆಯ ಬೇಕಾಗುತ್ತದೆ ಎಂದು ಹೇಳಿದರು. ಈಗಾಗಲೇ ಕಂಡಂತೆ ದೊಡ್ಡಬಳ್ಳಾಪುರ ನಗರ ಗ್ರೇಡ್ ಒನ್ ನಗರಸಭೆ ಯಾಗಿದೆ, ಏಷ್ಯಾದ ಅತಿ ದೊಡ್ಡ ಎರಡನೇ ಕೈಗಾರಿಕಾ ಪ್ರದೇಶ, ಭೌಗೋಳಿಕವಾಗಿಯೂ ನಾವು ಮುಂದೆ ಇದ್ದೇವೆ, ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ, ಆದರೆ ಕೆಲವು ಮೂಲಭೂತ ಸೌಕರ್ಯಗಳನ್ನು ನಾವುಗಳು ಹೋರಾಟದ ಮುಖಾಂತರ ಪಡೆಯುವುದು
ಅನಿವಾರ್ಯವಾಗಿದೆ ಈಗಾಗಲೇ ಕಂಡಂತೆ ಜಿಲ್ಲಾ ಆಸ್ಪತ್ರೆಯ ಹಾಗು ಇಎಸ್ಐ ಆಸ್ಪತ್ರೆ ಇನ್ನು ಪ್ರಾರಂಭವಾಗದೇ ಇರುವುದು ಅಲ್ಲದೆ ಸುಮಾರು 1 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಆರೋಗ್ಯ ಇಲ್ಲದೆ ಹತ್ತಾರು ಕೀಲೋ ಮೀಟರ್ ಹೋಗಿ ಬರಲು ಸಾಧ್ಯವಾಗದೆ ಇರುವುದು ತುಂಬಾ ಕಷ್ಠವಾಗಿದೆ . ಅಲ್ಲದೆ ನಗರದಲ್ಲಿ ಹೊರ ರಾಜ್ಯ ದವರ ಹಾವಳಿ ಹೆಚ್ಚಾಗಿರುವುದರಿಂದ ಸ್ಥಳೀಕರಿಗೆ ಸೌಲಭ್ಯಗಳು ದೊರಕುತ್ತಿಲ್ಲ ಎಂದು ಹೇಳಿದರು.
ನಗರಸಭೆಯ ವ್ಯಾಪ್ತಿಯಲ್ಲಿ ವಿವಿಧ ಸಮಸ್ಯೆಗಳು-
ನಗರದ ಸ್ವಚ್ಛತೆ ಕಾಪಾಡಬೇಕು, ಬಸ್ ನಿಲ್ದಾಣ ಪ್ರಯಾಣಿಕರ ತಂಗು ದಾಣಾ ಆಸ್ಪತ್ರೆ, ಮಾರುಕಟ್ಟೆ ನಗರ ಸಭೆಗೆ ಒಳಪಟ್ಟ ಪಾರ್ಕ್ ಗಳನ್ನು ಸ್ವಚ್ಛಗೊಳಿಸಬೇಕು.
ದೊಡ್ಡಬಳ್ಳಾಪುರದ ಹೃದಯ ಭಾಗದಲ್ಲಿರುವ ಡಾ. ರಾಜಕುಮಾರ್ ಕಲಾಂ ಮಂದಿರದಲ್ಲಿ ಸ್ವಚ್ಛತೆ ಕಾಪಾಡಬೇಕು ವೇದಿಕೆಯಲ್ಲಿ ಸ್ಕ್ರೀನೆ ಬಟ್ಟೆ ಚೇರುಗಳು ಮತ್ತು ಎಲೆಕ್ಟ್ರಿಕಲ್ ಲೈಟ್ ಬದಲಾಯಿಸಬೇಕು.
ನಗರದ ಹೃದಯ ಭಾಗದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಜಗಜೀವ ಜೀವನ್ ರಾಮ್ ರವರ ಪ್ರತಿಮೆ ಮುಂಭಾಗದಲ್ಲಿರುವ ಇತಿಹಾಸ ಪ್ರಸಿದ್ಧ 16 ಕಣ್ಣಿನ ಬಾವಿಯನ್ನು ಸ್ವಚ್ಛಗೊಳಿಸಿ ಅದರ ಸುತ್ತಮುತ್ತಲು ತಡೆಗೋಡೆ ನಿರ್ಮಿಸಬೇಕು. ನೀರು ಶೇಖರಣೆಯ ಬಗ್ಗೆ ಕ್ರಮ ಕೈಗೊಳ್ಳಬೇಕು. ಮತ್ತು ನಗರದಲ್ಲಿ ರೋಡ್ ಗಳಲ್ಲಿರುವ ಗುಂಡಿಗಳನ್ನು ಕೂಡಲೇ ಮುಚ್ಚಬೇಕು, ಗುಂಡಿಗಳಲ್ಲಿ ನೀರು ತುಂಬಿ ಅಪಘಾತಗಳು ಹೆಚ್ಚಾಗುತ್ತಿದ್ದಾವೆ.
ಹಾಗೂ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ, ಮಕ್ಕಳು ಮತ್ತು ಹಿರಿಯ ನಾಗರಿಕರು ಓಡಾಡಲು ಸಾಧ್ಯವಾಗುತ್ತಿಲ್ಲ, ಇದರ ಬಗ್ಗೆ ತೀವ್ರ ಕ್ರಮ ತೆಗೆದುಕೊಳ್ಳಬೇಕು.
ದೊಡ್ಡಬಳ್ಳಾಪುರ ಹೃದಯ ಭಾಗದಲ್ಲಿರುವ ಸಿದ್ದಲಿಂಗಯ್ಯ ಸರ್ಕಲ್ ನಲ್ಲಿ ಐ ಮಾಸ್ಟ್ ದೀಪ ಕೂಡಲೇ ಸರಿಪಡಿಸಬೇಕು. ಮಳೆಗಾಲದಲ್ಲಿ ಸಾರ್ವಜನಿಕರಿಗೆ ಕರೆಂಟ್ ಶಾಕ್ ಹೊಡೆಯುತ್ತಿದೆ. ಕೂಡಲೆ ಕ್ರಮ ತೆಗೆದುಕೊಳ್ಳಬೇಕು.
ನಗರದಲ್ಲಿ ಇರುವಂತಹ ಎಲ್ಲ ಚರಂಡಿ ಮತ್ತು ಒಳಚರಂಡಿಗಳನ್ನು ಸುದ್ದಿಗೊಳಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಬೇಕು.
ನಗರದಲ್ಲಿ ಇರುವಂತಹ ಬೀದಿ ದೀಪಗಳನ್ನು ಸರಿಪಡಿಸ ಬೇಕು ಇದರಿಂದ ಹಿರಿಯರು ನಾಗರಿಕರು ಹಾಗು ಮಹಿಳೆಯರು ಮಕ್ಕಳು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಓಡಾಡಲು ಸಮಸ್ಯೆಯಾಗುತ್ತಿದೆ.
ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ಜಿಲ್ಲಾ ಉಪಾಧ್ಯಕ್ಷ ಸಿಂಗಂ ಸುರೇಶ್, ಸಂಘಟನಾ ಕಾರ್ಯದರ್ಶಿ ಮಹದೇವ್, ಶಿವಪ್ರಸಾದ್, ಸದಸ್ಯಗಳಾದ ಅಶೋಕ್, ಮೋಹನ್, ಚಂದ್ರಶೇಖರ್ ಭಾಗವಹಿಸಿದ್ದರು.
ದೊಡ್ಡಬಳ್ಳಾಪುರ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಕೂಗುಳದೆ ದೂರದಲ್ಲಿದ್ದರೂ ಮೂಲಭೂತ ಸೌಕರ್ಯಗಳನ್ನು ಪಡೆಯುವಲ್ಲಿ ವಿಫಲವಾಗಿದೆ, ನೀರಿನ ಸಮಸ್ಯೆ, ಒಳ ಚರಂಡಿ, ರೋಡ್ ಗಳು, ಕೂಡಲೇ ನಗರಸಭೆಯ ಪೌರಾಯುಕ್ತರು ಸಾರ್ವಜನಿಕರ ಹಿತಾಶಕ್ತಿಯಿಂದ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಕನ್ನಡ ಜಾಗೃತಿ ವೇದಿಕೆ ತಾ ಅಧ್ಯಕ್ಷ ಶಶಿಧರ್ ಸಿ ಒತ್ತಾಯಿಸಿದರು.

