ಮೇಡ್ ಇನ್ ಕರ್ನಾಟಕ- ಸಾಕಾರವಾಗುತ್ತಿದೆ-ಎಂ.ಬಿ ಪಾಟೀಲ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೇಡ್ ಇನ್ ಕರ್ನಾಟಕ- ಸಾಕಾರವಾಗುತ್ತಿದೆ ಕನ್ನಡಿಗರ ಕನಸು ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.

ನಮ್ಮ ಸರ್ಕಾರದ ವಿನೂತನ ಯೋಜನೆಗಳು , ಹೊಸ ಚಿಂತನೆಗಳ ಪರಿಣಾಮ ಕನ್ನಡಿಗರ ಕನಸು ನನಸಾಗುತ್ತಿದೆ. ಮೇಡ್ ಇನ್ ಕರ್ನಾಟಕಉತ್ಪನ್ನಗಳು ಪ್ರಪಂಚದೆಲ್ಲೆಡೆ ಹಂಚಿಕೆಯಾಗುತ್ತಿರುವುದು ಹೆಮ್ಮೆ ಹೆಚ್ಚಿಸಿದೆ.

- Advertisement - 

ದೇವನಹಳ್ಳಿಯ ಫಾಕ್ಸ್ಕಾನ್ ನಲ್ಲಿ ಐಫೋನ್ 17 ತಯಾರಿಕೆ ಆರಂಭವಾಗಿದೆ. ಬೆಳಗಾವಿಯ ಏಕಸ್ ಭಾರತದಲ್ಲೇ ಅತಿ ದೊಡ್ಡ ಏರೋಸ್ಪೇಸ್ ಕ್ಲಸ್ಟರ್  ಎಂದು ಕರೆಸಿಕೊಂಡು ಬೋಯಿಂಗ್ ಮತ್ತು ಏರ್ ಬಸ್ ಗೆ ಬೇಕಾದ ಬಿಡಿಭಾಗಗಳನ್ನು ಪೂರೈಸುತ್ತಿದೆ. ಧಾರವಾಡದ ನೈಡೆಕ್ ಭವಿಷ್ಯದ ಇವಿ ಮೋಟಾರ್ ಹಾಗೂ ಗ್ರೀನ್ ಎನರ್ಜಿ ಕೇಂದ್ರವಾಗಿ ನಿರ್ಮಾಣಗೊಳ್ಳುತ್ತಿದೆ.  ಪರಂಪರೆ ಸಾರುವ ಮೈಸೂರು ಸ್ಯಾಂಡಲ್ ಪರಿಮಳ 23ಕ್ಕೂ ಅಧಿಕ ದೇಶಗಳಲ್ಲಿ ಪಸರಿಸುತ್ತಿದೆ.

 ಕರ್ನಾಟಕವನ್ನು ಜಾಗತಿಕ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿಸುವ ನಮ್ಮ ಗುರಿಗೆ ಈ ಫಲಿತಾಂಶಗಳು ಮತ್ತಷ್ಟು ಬಲ ತುಂಬಿದ್ದು , $1 ಟ್ರಿಲಿಯನ್ ಆರ್ಥಿಕ ಶಕ್ತಿಯಾಗುವತ್ತ ನಾವು ದೃಢ ಹೆಜ್ಜೆ ಇಡುತ್ತಿದ್ದೇವೆ ಎಂದು ಸಚಿವ ಪಾಟೀಲ್ ತಿಳಿಸಿದರು.

- Advertisement - 

 

Share This Article
error: Content is protected !!
";