ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸಭೆಯ ಅಧಿವೇಶನ ಸಂದರ್ಭದಲ್ಲಿ ಆರ್ಎಸ್ಎಸ್ ಗೀತೆ ಹಾಡಿದಕ್ಕೆ ಕ್ಷಮೆ ಕೇಳಲು ಸಿದ್ಧ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ಲಾಯಲ್ ಕಾಂಗ್ರೆಸ್ ಮ್ಯಾನ್. ಯಾರ ಮನಸ್ಸು ನೋಯಿಸುವ ಉದ್ದೇಶ ನನ್ನದಲ್ಲ. ನಿಮ್ಮ ಭಾವನೆಗೆ ನಾನು ನೋವು ಮಾಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೆ ನಾನು ಕ್ಷಮೆ ಕೇಳಲು ಸಿದ್ಧ. ಇಂಡಿಯಾ ಅಲೆಯನ್ಸ್ಗೂ ನಾನು ಕ್ಷಮೆ ಕೇಳುತ್ತೇನೆ. ಅಪಾಲಜಿ ಕೇಳೋದ್ರಲ್ಲಿ ತಪ್ಪೇನಿಲ್ಲ. ನಾನು ಗಾಂಧಿ ಕುಟುಂಬದಿಂದ ರಾಜಕಾರಣ ಮಾಡಿದವನು. ಖರ್ಗೆಯವರ ಮಾರ್ಗದರ್ಶನದಲ್ಲಿ ಬೆಳೆದವನು. ನಾನು ಎಂತೆಂಥವರಿಗೋ ಹೆದರಿದವನಲ್ಲ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಇನ್ನೂ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸೇರಿದಂತೆ, ಅಸೆಂಬ್ಲಿಯಲ್ಲಿ ಇರಬಹುದು. ನಾನು ಎಲ್ಲವನ್ನೂ ಫೇಸ್ ಮಾಡಿದ್ದೇನೆ. ಸದನದಲ್ಲಿ ಆರ್ಎಸ್ಎಸ್ ಬಗ್ಗೆ ಪಾಸಿಂಗ್ ಕಮೆಂಟ್ ಕೊಟ್ಟವನು. ಅಸೆಂಬ್ಲಿಯಲ್ಲಿ ಬಿಜೆಪಿಯವರು ಮಾತನಾಡಿದ್ರು. ಆ ಸಂದರ್ಭ ಅವರ ಪಕ್ಷ ಸಿದ್ಧಾಂತದ ಅರಿವಿದೆ. ಅವರಿಗೆ ನಾನು ಕಾಲೆಳೆದಿದ್ದು, ಇದೇನುಹೊಸದೇನುಅಲ್ಲ. ನನ್ನ ಆಚಾರ – ವಿಚಾರಗಳನ್ನು ಮಾತನಾಡಿದ್ದೇನೆ.
ಇಂದಿರಾ ಗಾಂಧಿ ಸತ್ತ ದಿನ ನನ್ನ ಟಾಕೀಸ್ಗೆ ಇಂದಿರಾ ಗಾಂಧಿ ಚಿತ್ರಮಂದಿರ ಅಂತ ಹೆಸರಿಟ್ಟಿದ್ದೆ. ನನಗೆ ಗಾಂಧಿ ಕುಟುಂಬದ ಜೊತೆ ಭಕ್ತ-ದೇವರ ಸಂಬಂಧ. ಅವರ ಆಶೀರ್ವಾದ ಪಡೆದೇ ರಾಜಕಾರಣ ಮಾಡ್ತಿದ್ದೇನೆ ಎಂದು ಡಿಸಿಎಂ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಾನು ಎಂಎ ಪೊಲಿಟಿಕಲ್ ಸೈನ್ಸ್ ಓದಿ 2008ರಲ್ಲಿ ಪದವೀಧರನಾದೆ. ವಿದ್ಯಾರ್ಥಿ ದೆಸೆಯಲ್ಲಿ ಎಲ್ಲ ಪಾರ್ಟಿ ಅಧ್ಯಯನ ಮಾಡಿದ್ದೆ. ಕಮ್ಯುನಿಸ್ಟ್, ಆರ್ಎಸ್ಎಸ್, ಜನತಾಪಕ್ಷ, ಜನತಾದಳ, ಮುಸ್ಲಿಂ ಲೀಗ್ ಬಗ್ಗೆ ತಿಳಿದಿದ್ದೇನೆ ಎಂದು ಅವರು ತಿಳಿಸಿದರು.
ಪೊಲಿಟಿಕಲ್ ಲೀಡರ್ ಆಗಿ ಎಲ್ಲಾ ತಿಳಿದಿದ್ದೇನೆ. ಅವರು ನನ್ನ ರಾಜಕೀಯ ವಿರೋಧಿಗಳು. ನಮ್ಮ ಕಾರ್ಯಕರ್ತರಿಗೆ ನಾನು ಪಾಠ ಹೇಳ್ತೇನೆ ಎಂದು ಡಿಸಿಎಂ ಸಿಳಿಸಿದರು.
ಗಾಂಧಿ ಹೋರಾಟಕ್ಕೆ ನೂರು ವರ್ಷ ಆಯ್ತು. ನೂರು ವರ್ಷದ ನೆನಪಿಗಾಗಿ ಕಾಂಗ್ರೆಸ್ ಭವನ ಕಟ್ಟಲು ಹೊರಟೆ. ಕಾಂಗ್ರೆಸ್ ಭವನ ನಮಗೆ ದೇವಸ್ಥಾನ ಇದ್ದಂತೆ. ನನ್ನ ಲಾಯಲ್ಟಿ ಬಗ್ಗೆ ಅನುಮಾನವಿದ್ಯಾ? ಎಂದು ಶಿವಕುಮಾರ್ ಪ್ರಶ್ನಿಸಿ ಅಂತವರಿಗೆ ನನ್ನ ತನ ಗೊತ್ತಿಲ್ಲ ಎಂದು ಸ್ವಪಕ್ಷೀಯ ನಾಯಕರಿಗೆ ಪರೋಕ್ಷ ಟಾಂಗ್ ನೀಡಿದರು.
ವಿಲಾಸ್ ರಾವ್ ದೇಶಮುಖ್ ಸರ್ಕಾರ ಪತನವಾಗುತ್ತಿತ್ತು. ಆ ಸಂದರ್ಭದಲ್ಲಿ ನೂರು ಮಂದಿ ಶಾಸಕರನ್ನು ತಂದು ಕೂಡಿಹಾಕಿದ್ದೆ.ಆಗ ಬಿಯರ್, ಮಾಂಸ ಹಂಚಿದ್ದೆ ಅಂತ ದೊಡ್ಡ ನ್ಯೂಸ್ ಮಾಡಿದ್ರು. ಆಗ ಹೋಟೆಲ್ ಮೇಲೆ ಐಟಿ ರೇಡ್ ಆಯ್ತು. ಅಹಮದ್ ಪಟೇಲ್ ಚುನಾವಣೆ ವೇಳೆ ದಾಳಿ ಮಾಡಿದ್ದರು. ನನ್ನ 70 ಮಂದಿ ಕುಟುಂಬದ ಮೇಲೆ ದಾಳಿಯಾಯ್ತು. ಐಟಿ, ಇಡಿ ಎಲ್ಲಾ ಕೇಸ್ ಗಳನ್ನೂ ಹಾಕಿದ್ರು. ಜೈಲಿಗೆ ಹಾಕಿದ್ರು, ಅಲ್ಲಿಂದ ನಾನು ಬಂದೆ. ಡಿಕೆಶಿ ರಾಜಕೀಯ ಮುಗಿಯಿತು ಅಂದ್ರು. ಬಹಳ ಜನ ಖುಷಿ ಪಟ್ರು, ಕೆಲವರು ನೋವು ಪಟ್ರು. ಖರ್ಗೆ, ಸೋನಿಯಾ ನನಗೆ ಈ ಜವಾಬ್ದಾರಿ ಕೊಟ್ರು. ಅವತ್ತಿನಿಂದ ನನ್ನ ಕೆಲಸ ಮರೆತಿಲ್ಲ, ನಿನ್ನೆ ರಾತ್ರಿ ಮಲಗಿದಾಗ ರಾತ್ರಿ 3 ಗಂಟೆ. ನನ್ನದು ಈ ರೀತಿಯ ಜನರ ಸೇವೆ ಎಂದು ಡಿಸಿಎಂ ತಿಳಿಸಿದರು.
ತಿಹಾರ್ ಜೈಲಿಗೆ ನನ್ನನ್ನು ಕಳಿಸಿದ್ರಲ್ಲ ಆ ಕೇಸ್ ಏನಾಯ್ತು ಗೊತ್ತಿದ್ಯಾ?. ಆ ಕೇಸನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. 10 ಅಡಿ ಬಾತ್ ರೂಂನಲ್ಲಿ ನಾನು ಮಲಗಿದ್ದೆ. ಅವರು ಕೊಟ್ಟ ಊಟ ನಾನುಮಾಡಿದ್ದೆ. ಜೈಲು ಶಿಕ್ಷೆ ಅನುಭವಿಸಿದವರಿಗೆ ಗೊತ್ತು ಎಂದು ಜೈಲು ವಾಸದ ಸನ್ನಿವೇಶವನ್ನು ಡಿಸಿಎಂ ನೆನಪು ಮಾಡಿಕೊಂಡರು.
ಬಿಹಾರಕ್ಕೆಹೋಗಿದ್ದ ಸಂದರ್ಭದಲ್ಲಿ ಅಲ್ಲಿದ್ದವರು ನನ್ನನ್ನು ಕೇಳಿದ್ರು. ನನ್ನ ನಾಯಕರೊಬ್ಬರು ಮಾತನಾಡಿದ್ರು. ಅವರಿಗೆ ಸಂದರ್ಭ ಬಂದಾಗ ಉತ್ತರ ಕೊಡ್ತೇನೆ. ಕೆಲವರು ಸಲಹೆ ಕೊಟ್ಟಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡೋದಲ್ಲ. ಪಾರ್ಟಿ ಆಫೀಸಿಗೆ ಬನ್ನಿ ಮಾತನಾಡೋಣ. ನಾನು ಬಾರ್ನ್ ಕಾಂಗ್ರೆಸ್ ಮ್ಯಾನ್. ನಾನು ಡೈ ಆಗೋದು ಕಾಂಗ್ರೆಸ್ ಮ್ಯಾನ್. ಇದನ್ನು ಪ್ರಶ್ನಿಸಿದವರು ಮೂರ್ಖರು ಎಂದು ಸ್ವಪಕ್ಷೀಯ ನಾಯಕರಿಗೆ ಡಿಕೆಶಿ ತಿರುಗೇಟು ನೀಡಿದರು.
ಧರ್ಮ ಬಿಡುವವನಲ್ಲ: ನನ್ನ ಧರ್ಮ ಬಿಡುವುದಿಲ್ಲ. ಮಾತುಬಿಡದ ಮಂಜುನಾಥ ಕಾಸು ಬಿಡದ ತಿಮ್ಮಪ್ಪ. ನಾನೊಬ್ಬ ಸೆಕ್ಯುಲರ್ ಮನುಷ್ಯ. ನನಗೆ ಜಾತಿಯ ಬಗ್ಗೆ ನಂಬಿಕೆ ಇಲ್ಲ.
ಮಾನವ ಧರ್ಮಕ್ಕೆ ಜಯವಾಗಲಿ. ಇದು ನಮ್ಮಗಂಗಾಧರ ಅಜ್ಜನವರ ಮಾತು. ಕ್ರಿಶ್ಚಿಯನ್, ಮುಸ್ಲಿಂ, ಜೈನರ ಬಗ್ಗೆ ನಂಬಿಕೆಯಿದೆ. ಧರ್ಮ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವು ಆದರೂ ನಿಷ್ಠೆ ಒಂದೇ. ಸೂರ್ಯ, ಚಂದ್ರ, ಬೆಳಕಿಗೆ ಯಾವುದೇ ಭೇದವಿಲ್ಲ. ಪೈಗಂಬರ ತತ್ವದ ಬಗ್ಗೆ ನಿಷ್ಠೆ ಉಳ್ಳವನು. ಎಲ್ಲ ಶ್ಲೋಕಗಳನ್ನು ಇರುವಲ್ಲೇ ಹೇಳುವವನು. ಇದರಲ್ಲಿ ಯಾರೂ ರಾಜಕಾರಣ ಮಾಡಬೇಡಿ. ಕಟ್ ಪೇಸ್ಟ್ ಮಾಡಿ ನೀವು ಹಾಕಬೇಡಿ. ನಾನು ನನ್ನ ಡ್ಯೂಟಿ ಮಾಡ್ತೇನೆ. ಮಾಧ್ಯಮದವರು ನನ್ನನ್ನ ಬೆಳೆಸಿದ್ದೀರಿ. ಟೀಕೆಯನ್ನೂ ಮಾಡಿದ್ದೀರಿ. ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದ್ದೀರಿ. ಇದಕ್ಕೆ ನಾನು ತೆರೆ ಎಳೆಯುವ ಕೆಲಸ ಮಾಡ್ತೇನೆ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ಯಾರೂ ಕೇಳಿಲ್ಲ :
ಸದನದಲ್ಲಿ ಹೇಳಿದ ಗೀತೆ ಕುರಿತು ರಾಹುಲ್ ಗಾಂಧಿ ಕೇಳಿದ್ರಾ ಎಂಬ ಪ್ರಶ್ನೆಗೆ, ನನ್ನನ್ನು ಯಾರೂ ಕೇಳಿಲ್ಲ. ಅವರು ಬೇರೆಯವರಿಂದ ತಿಳಿದು ಕೊಂಡಿರಬಹುದು. ಪಕ್ಷದಲ್ಲೂ ಸೀನಿಯರ್ ಲೀಡರ್ಸ್ ನನ್ನನ್ನು ಗೈಡ್ ಮಾಡ್ತಿದ್ದಾರೆ. ನಾನೇನು ಆರ್ಎಸ್ಎಸ್ ಹೊಗಳಿದ್ದೇನಾ?. ಗೀತೆಯಲ್ಲಿ ಏನಿದೆಯೋ ಅದನ್ನು ಹೇಳಿದ್ದೆ. ನಾನು ಹಿಂದೆ ಪಾಂಚಜನ್ಯ ಅಂತ ಹೆಸರಿಟ್ಟಿದ್ದೆ. ಎಸ್. ಎಂ ಕೃಷ್ಣರ ಕಾಲದಲ್ಲಿ ಪಾಂಚಜನ್ಯ ಹೋರಾಟ ಮಾಡಿದ್ದೆವು. ಆಗ ಸೋನಿಯಾ ಗಾಂಧಿ ಅದರ ಬಗ್ಗೆ ಕೇಳಿದ್ದರು. ನಾನು ಅವರಿಗೆ ಆ ಪದದ ಸಾರಾಂಶ ಹೇಳಿದ್ದೆ ಎಂದು ಡಿಕೆ ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.

