ಹಿಮಾಚಲ ಪ್ರದೇಶ, ತೆಲಂಗಾಣ ಬಳಿಕ ಮುಂದಿನ ಸರದಿ ಕರ್ನಾಟಕ ? 

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿಮಾಚಲ ಪ್ರದೇಶ, ತೆಲಂಗಾಣ ಬಳಿಕ ಮುಂದಿನ ಸರದಿ ಕರ್ನಾಟಕ ತೆಲಂಗಾಣದಲ್ಲೂ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ಸರ್ಕಾರ ಈಗ ಸಂಪೂರ್ಣ ದಿವಾಳಿಯಾಗಿ ಬಿಟ್ಟಿದೆ ಎಂದು ಜೆಡಿಎಸ್ ತಿಳಿಸಿದೆ.

ಕರ್ನಾಟಕದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಲೂಟಿಹೊಡೆದು, ಆ ದುಡ್ಡಲ್ಲಿ ಸರ್ಕಾರ ರಚಿಸಿದ್ದ ತೆಲಂಗಾಣ ಕಾಂಗ್ರೆಸ್‌ಇಂದು, ಜನರಿಗೆ ನೀಡಿದ್ದ ಭರವಸೆ ಈಡೇರಿಸಲು ನಯಾಪೈಸೆ ಇಲ್ಲವಾಗಿದೆ.

- Advertisement - 

ಭಿಕ್ಷೆ ಬೇಡಿದರೂ ಒಂದು ರೂ. ಸಿಗುತ್ತಿಲ್ಲ. ಸರ್ಕಾರದ ಬೊಕ್ಕಸವೂ ಬತ್ತಿಹೋಗಿದೆ. ಅಡಮಾನವಿಟ್ಟು ಹಣ ಪಡೆಯಲು 1 ಇಂಚು ಜಾಗವೂ ಸಹ ಸರ್ಕಾರದ ಬಳಿ ಇಲ್ಲ ಎಂದು ತೆಲಂಗಾಣ ಸಿಎಂ ರೇವಂತ್‌ರೆಡ್ಡಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.

ಕರ್ನಾಟಕದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ನಮ್ಮ ರಾಜ್ಯದ ಸಿಎಂ  ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಲ್ಲಿ, ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಂಗಳಿಗೆ 50 ರಿಂದ 60 ಸಾವಿರ ರೂ. ಸಂಬಳ ನೀಡುತ್ತಾ ರಾಜ್ಯದ ಬೊಕ್ಕಸ ಬರಿದು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

- Advertisement - 

 

Share This Article
error: Content is protected !!
";