RSS ಕುರಿತು ಕಾಂಗ್ರೆಸ್ಸಿಗರಿಗೆ ಮೊದಲಿನಿಂದಲೂ ಅಸಹನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮಸ್ತೇ ಸದಾ ವತ್ಸಲೇ ಮಾತೃಭೂಮಿ… ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನಾ ಗೀತೆ ಮಾತೃಭೂಮಿಗೆ ಧನ್ಯತೆ ಸಮರ್ಪಿಸುವ ಸಂಕೇತವನ್ನು ರವಾನಿಸುತ್ತದೆ, ರಾಷ್ಟ್ರಭಕ್ತಿ ಪ್ರೇರೇಪಿಸುತ್ತದೆ, ಇದು ಸಂಘಟನೆಯ ಗೀತೆಯಷ್ಟೇ ಅಲ್ಲ ದೇಶಭಕ್ತಿಯ ಬದ್ಧತೆಯನ್ನು ಜಗತ್ತಿಗೇ ಸಾರಿ ಹೇಳುವ ಗೀತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.

ನಮ್ಮನ್ನು ಹೆರುವ ತಾಯಿಗೆ ಮಡಿಲ ಆಸರೆ ನೀಡುವವಳು ಭೂಮಿತಾಯಿ. ಈ ಹಿನ್ನಲೆಯಲ್ಲಿಯೇ ಮಾತೃ ಭೂಮಿಎಂದು ಜನ್ಮದಾತೆಯಷ್ಟೇ ಜನ್ಮಭೂಮಿಯನ್ನು ಆರಾಧಿಸುತ್ತೇವೆ, ತಾಯ್ನೆಲಕ್ಕಾಗಿ ನಮ್ಮನ್ನೇ ಸಮರ್ಪಿಸಿಕೊಳ್ಳುವಷ್ಟು  ಭಾವುಕರಾಗುತ್ತೇವೆ. ಜನನಿ, ಜನ್ಮ ಭೂಮಿ ಮಹತ್ವ ತಿಳಿಸಿಕೊಟ್ಟು ರಾಷ್ಟ್ರ ಭಕ್ತಿ ಪಡಿಮೂಡಿಸುವ @RSSorg ಬಗ್ಗೆ ಕಾಂಗ್ರೆಸ್ಸಿಗರಿಗೆ ಮೊದಲಿನಿಂದಲೂ ಅಸಹನೆ ಏಕೆಂದರೆ ಗುಲಾಮಿ ಚೌಕಟ್ಟಿನಲ್ಲಿ ನೆಹರು ಕುಟುಂಬವನ್ನು ಓಲೈಸುವ ಭಟ್ಟಂಗಿತನ ಬಿಟ್ಟರೆ ಆವರಿಗೆ ಬೇರೇನೂ ತಿಳಿದಿಲ್ಲ. ಸರ್ವಾಧಿಕಾರಿತನ, ಭ್ರಷ್ಟತೆ, ಮತಬ್ಯಾಂಕ್ ರಾಜಕಾರಣಕ್ಕಾಗಿ ವಿದ್ರೋಹಿ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪಠ್ಯಕ್ರಮವನ್ನು ಮಾತ್ರ ಕಾಂಗ್ರೆಸ್ ಪಾಠ ಶಾಲೆಯಲ್ಲಿ ಬೋಧಿಸಲಾಗುತ್ತದೆ ಎಂದು ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ. 

- Advertisement - 

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪ್ರಕರಣ ದೇಶದ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾಗಲಿದೆ, ವಿಧಾನಸಭೆಯಲ್ಲಿ ಡಿಕೆಶಿ ಅವರು ಸಂಘದ ಗೀತೆ ತಮಗೂ ತಿಳಿದಿದೆ ಎಂಬ ಪಾಂಡಿತ್ಯ ಪ್ರದರ್ಶಿಸಲು ಹೋಗಿ ಸದಾ ವತ್ಸಲೇ ಮಾತೃಭೂಮಿ…ಪಠಿಸಿದರು.

ಇದನ್ನೇ ಮಹಾಪರಾಧವೆಂದು ಪರಿಗಣಿಸಿದ ಕಾಂಗ್ರೆಸ್ ಮುಂದಾಳುಗಳು ಡಿಕೆ ಶಿವಕುಮಾರ್ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ರಾ ಕಮಾಂಡ್ ಮುಂದೆ ಕಟಕಟ್ಟೆಯಲ್ಲಿ ನಿಲ್ಲಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಡಿಕೆಶಿ ಅವರು ಬಾಗಿ ಕ್ಷಮಾಪಣೆ ಕೇಳುವವಂತೆ ಮಾಡಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು.
ಬಂಡೆಯಂಥ ಡಿಕೆಶಿ ಅವರಿಗೇ ಈ ಗತಿಯಾದರೆ, ಕಾಂಗ್ರೆಸ್ ಪಕ್ಷದಲ್ಲಿರುವ ಅದೆಷ್ಟೋ ದೇಶ ನಿಷ್ಠ ಕಾರ್ಯಕರ್ತರ ಸ್ಥಿತಿ ಹೇಗಿರಬಹುದು? ಎಂಬುದು ಊಹೆಗೂ ನಿಲುಕದ ಪ್ರಶ್ನೆಯಾಗಿದೆ. 

- Advertisement - 

ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದ ಕಾಂಗ್ರೆಸ್ ನ ಆಂತರಿಕ ವಲಯದಲ್ಲಿ ಇವತ್ತಿಗೂ ತುರ್ತುಪರಿಸ್ಥಿತಿ ಕರಾಳ ನೃತ್ಯ ಮಾಡುತ್ತಲೇ ಇದೆ ಎಂಬುದಕ್ಕೆ ಡಿಕೆಶಿ ಅವರ ಕ್ಷಮಾಪಣೆ ಕೇಳಿದ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾತೃಪ್ರೇಮ-ದೇಶ ಭಕ್ತಿಸ್ವಾಭಿಮಾನಿ ಪ್ರಜೆಯ ಹೆಮ್ಮೆಯ ಕಿರೀಟ, ತಾಯ್ನೆಲ್ಲದ ಬದ್ಧತೆಯನ್ನು ತೋರುವುದೇ ಅಪರಾಧವೆಂದು ಪರಿಗಣಿಸಿ ಕ್ಷಮಾಪಣೆ ಕೇಳುವ ಪರಿಸ್ಥಿತಿ ವ್ಯಕ್ತಿ ಒಬ್ಬನನ್ನು ಮುತ್ತುವುದಾದರೆ ಅದಕ್ಕಿಂತ ಘೋರ ದುರಂತ ಇನ್ನೊಂದಿಲ್ಲ. 

ಡಿ.ಕೆ ಶಿವಕುಮಾರ್ ಅವರ ಕ್ಷಮೆರಾಹುಲ್ ಗಾಂಧಿಯವರನ್ನು ತಣ್ಣಗಾಗಿಸಲು, ಅಧಿಕಾರ ರಾಜಕಾರಣವನ್ನು ಭದ್ರಪಡಿಸಿಕೊಳ್ಳಲು ಅನಿವಾರ್ಯವಾಗುವುದಾದರೆ ಅದು ಕರ್ನಾಟಕದ ಸ್ವಾಭಿಮಾನವನ್ನು ಒತ್ತೆಯಿಟ್ಟಂತೆ.
ಈಗಲೂ ಕಾಲ ಮಿಂಚಿಲ್ಲ ಡಿಕೆ ಶಿವಕುಮಾರ್ ಅವರು ನಮಸ್ತೆ ಸದಾ ವತ್ಸಲೇ ಮಾತೃಭೂಮಿ…. ಗೀತೆಯ ಅರ್ಥವನ್ನು ರಾಹುಲ್ ಗಾಂಧಿ ಅವರಿಗೆ ತಿಳಿಸಿಕೊಟ್ಟು ತಮ್ಮ ನಡೆಯನ್ನು ಸಮರ್ಥಿಸಿ ಕೊಳ್ಳಲಿ, “ಮಾತೃ ಭೂಮಿಗಿಂತ ಕಾಂಗ್ರೆಸ್ ದೊಡ್ಡದಲ್ಲಎಂಬ ಸಂದೇಶ ದೇಶಕ್ಕೆ ರವಾನಿಸಲಿ, ಆ ಮೂಲಕ ಸ್ವಾಭಿಮಾನಿ ಕನ್ನಡ ನೆಲದ ಘನತೆಯನ್ನು ಎತ್ತಿ ಹಿಡಿಯಲಿ ಎಂದು ವಿಜಯೇಂದ್ರ ಆಗ್ರಹ ಮಾಡಿದ್ದಾರೆ.

 

Share This Article
error: Content is protected !!
";