ಎನ್ಐಎ ತನಿಖೆ ಆಗಲಿ-ನಿಖಿಲ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡುವ ವಿಚಾರದಲ್ಲಿ ಎಸ್​ಐಟಿ ತನಿಖೆ ಪಾರದರ್ಶಕವಾಗಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರಿನ ಜೆ.ಪಿ. ಭವನದಲ್ಲಿ ಮಾತನಾಡಿದ ಅವರು, ಇದುವರೆಗೆ ಎಸ್ಐಟಿ ತನಿಖಾ ತಂಡದಿಂದ ಸತ್ಯ ಹೊರ ಬಂದಿಲ್ಲ. ಇಲ್ಲಿವರೆಗೆ ಈ ವಿಚಾರದ ಹಿಂದಿರುವ ನಿರ್ದೇಶಕರು, ನಿರ್ಮಾಪಕರು, ಚಿತ್ರ ಕಥೆ, ಸಂಭಾಷಣೆ ಯಾರದ್ದು ಅನ್ನೋದನ್ನು ತಿಳಿದುಕೊಳ್ಳಬೇಕು.

- Advertisement - 

ಇದನ್ನು ಎಸ್​ಐಟಿ ಮಾಡಲಾರದು. ಇದಕ್ಕಾಗಿ ಎನ್ಐಎ ತನಿಖೆ ಆಗಬೇಕು‌ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.

 

- Advertisement - 

 

Share This Article
error: Content is protected !!
";