ಸಹಕಾರಿ ಯೂನಿಯನ್ 62ನೇ ವಾರ್ಷಿಕ ಮಹಾ ಸಭೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಸಹಕಾರಿ ಯೂನಿಯನ್‌ನ 62ನೇ ವಾರ್ಷಿಕ ಮಹಾ ಸಭೆ ಇತ್ತೀಚಿಗೆ ನಗರದ ದಾವಣಗೆರೆ ರಸ್ತೆಯ ಜೆ.ಎಂ.ಕಂಫರ್ಟ್ಸ್ ಸಭಾಂಗಣದಲ್ಲಿ ನಡೆಯಿತು. ಯೂನಿಯನ್  ಅಧ್ಯಕ್ಷ ಹೆಚ್.ಎಂ.ದ್ಯಾಮಣ್ಣ ಕೋಗುಂಡೆ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಸಂಘಗಳ ಲಾಭದಲ್ಲಿ ಶೇ.2%  ರಷ್ಟು ಸಹಕಾರ ಶಿಕ್ಷಣ ನಿಧಿ ಪಾವತಿಸುತ್ತಿರುವ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಚಿತ್ರದುರ್ಗ ತಾಲ್ಲೂಕಿನ ಎಸ್.ಜೆ.ಎಂ. ಪತ್ತಿನ ಸಹಕಾರ ಸಂಘ,   ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ,  ಕಡ್ಲೆಗುದ್ದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಿರಿಯೂರುನ ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘದ  ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಸನ್ಮಾನಿಸಲಾಯಿತು.

- Advertisement - 

ಯೂನಿಯನ್ನಿನ ಜಿಲ್ಲಾ ಸಹಕಾರಯೂನಿಯನ್ ಉಪಾಧ್ಯಕ್ಷ ಹೆಚ್.ವಿ.ಪ್ರತಾಪ ಸಿಂಹ, ನಿರ್ದೇಶಕರುಗಳಾದ ಜಿಂಕಲು ಬಸವರಾಜ, ಮಾತೃಶ್ರೀ ಮಂಜುನಾಥ್,  ಜಿ.ಈ.ಅಜ್ಜಪ್ಪ, ಜಿ.ಎನ್.ಹರೀಶ್, ಜಿ.ಬಿ.ಶೇಖರಪ್ಪ, ಎ.ಚನ್ನಬಸಪ್ಪ, ಕೆ.ಆರ್.ಜಗನ್ನಾಥ್, ಪ್ರಭಾವತಿ, ಕೆ.ಜಗ್ಗಣ್ಣ, ಯೂನಿಯನ್ನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಶ್ರೀ ಪಿ.ಹುನಗುಂದ, ಉಪಸ್ಥಿತರಿದ್ದರು.

 

- Advertisement - 

 

 

Share This Article
error: Content is protected !!
";