ಚಾಂಪಿಯನ್ ಗಳಾದ ದೇವರಕೊಟ್ಟ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳು

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ತಾಲ್ಲೂಕು ಕ್ರೀಡಾಂಗಣ ಆವರಣದಲ್ಲಿ ನಡೆದ ಧರ್ಮಪುರ ವಲಯ ಮಟ್ಟದ ಹಿರಿಯ ಪ್ರಾಥಮಿಕ ವಿಭಾಗದ ಕ್ರೀಡಾಕೂಟದಲ್ಲಿ ದೇವರಕೊಟ್ಟ ಸಂಕೀರ್ಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ( ಪ.ಜಾ-33)ಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿ 14 ವರ್ಷದೂಳಗಿನವರ ಹೋಬಳಿ ಮಟ್ಟದ ಚಾಂಪಿಯನ್ ಗಳಾಗಿ ಹೊರಹೊಮ್ಮಿದ್ದಾರೆ.

ಕಬ್ಬಡಿ-ಬಾಲಕಿಯರು=ಪ್ರಥಮ, ರಿಲೆ ಬಾಲಕಿಯರು =ಪ್ರಥಮ, ರಿಲೆ ಬಾಲಕರು- ದ್ವಿತೀಯ, 100 ಮೀ ಓಟ ಬಾಲಕಿ & ಬಾಲಕ ಪ್ರಥಮ, 200 ಮೀ. ಓಟ =ಪ್ರಥಮ  ಬಾಲಕಿ & ಬಾಲಕರ ವಿಭಾಗ, Hurdelsನಲ್ಲಿ ಪ್ರಥಮ  ಬಾಲಕರು &ಬಾಲಕಿಯರು, ಉದ್ದ ಜಿಗಿತ – ಪ್ರಥಮ ಮತ್ತು ದ್ವೀತೀಯ ಬಾಲಕರು,

- Advertisement - 

ಉದ್ದ ಜಿಗಿತ=ಪ್ರಥಮ ಬಾಲಕಿಯರು, ಎತ್ತರ ಜಿಗಿತ = ಬಾಲಕರು ಮತ್ತು ಬಾಲಕಿಯರು ಪ್ರಥಮ ಮತ್ತು ದ್ವೀತೀಯ ಸ್ಥಾನ, ಡಿಸ್ಕಸ್ ಥ್ರೂ=ಪ್ರಥಮ ಸ್ಥಾನ, ಶಾಟ್ ಪುಟ್ = ತೃತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಪ್ರಾಂಶುಪಾಲ ಬಿ. ಬೋರಣ್ಣ  ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಓಬಳೇಶ್ ಬಿ ಮತ್ತು ಶಾಲಾ ಬೋಧಕ, ಭೋಧಕೇತರ ವರ್ಗ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

- Advertisement - 

 

 

 

 

Share This Article
error: Content is protected !!
";