ಗಣೇಶನ ಮೆರವಣಿಗೆ ವೇಳೆ ಪಟಾಕಿ ಸಿಡಿದು ಓರ್ವ ಬಾಲಕ ಸಾವು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ
6ನೇ ವಾರ್ಡ್ ಮುತ್ತೂರಿನಲ್ಲಿ  ಗಣೇಶ ಮೆರವಣಿಗೆಯಲ್ಲಿ ಪಟಾಕಿ ಸ್ಪೋಟಗೊಂಡು ಓರ್ವ ಬಾಲಕ ಮೃತಪಟ್ಟಿದ್ದು,ಪೋಲೀಸ್ ಸಿಬ್ಬಂದಿ ಸೇರಿದಂತೆ 8 ಮಂದಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. 

 ದೊಡ್ಡಬಳ್ಳಾಪುರ ನಗರದ ಮುತ್ತೂರು ವಾರ್ಡ್ ನಲ್ಲಿ ಇಂದು ಸಂಜೆ 6 ಗಂಟೆ ಸಮಯದಲ್ಲಿ ಘಟನೆ ನಡೆದಿದೆ, ಘಟನೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಝಾಕಿರ್ ಹುಸೇನ್ ಗಂಭೀರ ಗಾಯಗೊಂಡಿದ್ದಾರೆ, ಒರ್ವ ವಯೋವೃದ್ಧ ಮಹಿಳೆ, ಮಕ್ಕಳು ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ. 

- Advertisement - 

ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಕಳಿಸಲಾಗಿದೆ, ಗಂಭೀರ ಸ್ವರೂಪ ಗಾಯವಾಗಿರುವ ಹಿನ್ನಲೆ ಸಾವಿನ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸ್ಪೋಟದ ತೀರ್ವತೆಗೆ ಸುತ್ತಮುತ್ತಲಿನ ಐದಾರು ಮನೆಗಳ ಕಿಟಕಿ ಜಖಂಗೊಂಡಿದೆ. 

 ಮುತ್ತೂರು ವಾರ್ಡ್ ನ ಫ್ರೆಂಡ್ಸ್ ವಿನಾಯಕ ಬಳಗ ಇಂದು ಸಂಜೆ ಗಣೇಶನ ವಿಸರ್ಜನೆ ಮಾಡಲು ಮೆರವಣಿಗೆಯಲ್ಲಿ ಹೊರಟ್ಟಿದ್ದರು, ಲಿಫ್ಟ್ ವಾಹನದಲ್ಲಿ ಗಣೇಶನ ಮೆರವಣಿಗೆ ಮಾಡಲಾಗುತ್ತಿತ್ತು, ಲಿಫ್ಟ್ ವಾಹನ ಸೈಲೆಂಸರ್ ಬಳಿ ಪಟಾಕಿ ಇಡಲಾಗಿದ್ದು, ಸೈಲೆಂಸರ್ ಬಿಸಿಯ ತಾಪಕ್ಕೆ ಪಟಾಕಿ ಸ್ಪೋಟಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

- Advertisement - 

 ಸ್ಥಳಕ್ಕೆ ಡಿ.ವೈ.ಎಸ್.ಪಿ ರವಿ ಸೇರಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಸಾದಿಕ್ ಪಾಷ ಪೊಲೀಸ್ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸುತಿದ್ದಾರೆ.

 

 

Share This Article
error: Content is protected !!
";