ಡೆಂಗ್ಯೂ ಪತ್ತೆ: ಮುಂಜಾಗ್ರತಾ ಕ್ರಮ ವಹಿಸಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಮಾರುತಿ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶದಲ್ಲಿ ಡೆಂಗ್ಯೂ ಪತ್ತೆ ಹಿನ್ನಲೆಯಲ್ಲಿ ಶುಕ್ರವಾರ ಜಿಲ್ಲಾ ಸಿಎಂಡಿ ವಿಭಾಗದ ಎಸ್.ಅಶೋಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಡೆಂಗ್ಯೂ ಪತ್ತೆ ಹಿನ್ನಲೆಯಲ್ಲಿ ಆಶಾ ಕಾರ್ಯಕರ್ತರ ತಂಡ ರಚನೆ ಮಾಡಿ, ಸುಮಾರು ನೂರಕ್ಕೆ ಹೆಚ್ಚು ಮನೆಗಳನ್ನು ಭೇಟಿ, ಲಾರ್ವಾ ಸಮೀಕ್ಷೆ ಮಾಡಿ, ಪಾಸಿಟಿವ್ ಬಂದ ತಾಣಗಳು ಹಾಗೂ ಸ್ವಚ್ಛತೆ ಬಗ್ಗೆ ತಿಳುವಳಿಕೆ ನೀಡಲಾಯಿತು. 

- Advertisement - 

ನೀರನ್ನು ಶೇಖರಣೆ ಮಾಡುವ ಡ್ರಮ್ ತೊಟ್ಟಿಗಳು ಹಾಗೂ ಘನತ್ಯಾಜ್ಯ ವಸ್ತುಗಳು, ಟೈರ್, ಹೂವಿನ ಕುಂಡಗಳು ಇವೆಲ್ಲವನ್ನೂ ಪರಿಶೀಲಿಸಿ, ಡೆಂಗ್ಯೂ ಹರಡುವ ವಿಧಾನ, ಜ್ವರದ ಲಕ್ಷಣಗಳು, ತಡೆಗಟ್ಟುವ ಕ್ರಮ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಯಿತು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಶೋಭಾ ಸೇರಿದಂತೆ ಮತ್ತಿತರರು ಇದ್ದರು.

- Advertisement - 

 

Share This Article
error: Content is protected !!
";