ನಗರಸಭೆ ಪ್ರಭಾರಿ ಅಧ್ಯಕ್ಷರಾಗಿ ಶಕೀಲಾಭಾನು ಅಧಿಕಾರ ಸ್ವೀಕಾರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹನ್ನೆರಡನೆ ವಾರ್ಡ್‌ನ ಶಕೀಲಾಭಾನು ಸೈಯದ್ ಸೈಫುಲ್ಲಾ ನಗರಸಭೆ ಪ್ರಭಾರಿ ಅಧ್ಯಕ್ಷರಾಗಿ ಶನಿವಾರ ಅಧಿಕಾರ ವಹಿಸಿಕೊಂಡರು.

ಒಂದು ವರ್ಷಗಳ ಕಾಲ ನಗರಸಭೆ ಅಧ್ಯಕ್ಷರಾಗಿದ್ದ ಸುಮಿತಾ ರಾಘವೇಂದ್ರ ರವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಶಕೀಲಾಭಾನು ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

- Advertisement - 

ಒಂದು ವರ್ಷಗಳ ಕಾಲ ನಗರಸಭೆ ಅಧ್ಯಕ್ಷರಾಗಿದ್ದ ಸುಮಿತ ಮಾತನಾಡಿ ನಗರಸಭೆ ಸದಸ್ಯರು ಹಾಗೂ ಸಿಬ್ಬಂದಿಯವರು ಸಹಕಾರ ನೀಡಿದಾಗ ನಗರದ ಅಭಿವೃದ್ದಿಗೆ ಶ್ರಮಿಸಲು ಸಾಧ್ಯ. ಇಲ್ಲದಿದ್ದರೆ ನಾಗರೀಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಕಷ್ಟವಾಗುತ್ತದೆಂದರು.

ನಗರಸಭೆ ಪೌರಾಯುಕ್ತರಾದ ರೇಣುಕಾ ಮಾತನಾಡುತ್ತ ಜನಪ್ರತಿನಿಧಿಗಳಾಗಿ ಕುರ್ಚಿ ಮೇಲೆ ಕೂರುವುದು ಜವಾಬ್ದಾರಿ ಕೆಲಸ. ಸುಮಿತಾರವರು ಒಂದು ವರ್ಷಗಳ ಕಾಲ ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅವಧಿ ಮುಗಿದ ಕಾರಣಕ್ಕೆ ರಾಜಿನಾಮೆ ನೀಡಿ ಮತ್ತೊಬ್ಬರಿಗೆ ಅವಕಾಶ ಕೊಟ್ಟಿದ್ದರಿಂದ ಶಕೀಲಾಭಾನು ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧ್ಯಕ್ಷರು ಮತ್ತು ಸದಸ್ಯರುಗಳ ಮಾರ್ಗದರ್ಶನದಂತೆ ನಾವುಗಳು ಕೆಲಸ ಮಾಡಬೇಕೆಂದು ನುಡಿದರು.

- Advertisement - 

ನಗರಸಭೆ ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಕೀಲಾಭಾನು ನಗರದ ಅಭಿವೃದ್ದಿಗೆ ಸದಸ್ಯರು ಮತ್ತು ಸಿಬ್ಬಂದಿಗಳು ನನಗೆ ಕೈಜೋಡಿಸಿ ಎಂದು ಮನವಿ ಮಾಡಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸ್ರುಲ್ಲಾ ಮಾತನಾಡಿ ಎಲ್ಲರೂ ಸೇರಿ ಒಡಂಬಡಿಕೆ ಮಾಡಿಕೊಂಡಂತೆ ಸುಮಿತಾರವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಶಕಿಲಾಭಾನು ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಉತ್ತಮ ಆಡಳಿತಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಕೋರಿದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಮಾಜಿ ಸದಸ್ಯರುಗಳಾದ ಮಹೇಶ್, ಟಿ.ರಮೇಶ್, ನಗರಸಭೆ ನಾಮ ನಿರ್ದೇಶಕ ಸದಸ್ಯ ಹೆಚ್.ಶಬ್ಬಿರ್‌ಭಾಷ, ಸೈಯದ್ ಸೈಫುಲ್ಲಾ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದು, ಪ್ರಭಾರಿ ಅಧ್ಯಕ್ಷರಿಗೆ ಶುಭ ಕೋರಿದರು.

 

 

 

Share This Article
error: Content is protected !!
";