![](https://www.chandravallinews.com/wp-content/uploads/2024/06/drip-horti-1024x656.jpeg)
i
ವಿವಿಧ ಯೋಜನೆಗಳ ಕುರಿತು ರೈತರಿಗೆ ಮಾಹಿತಿ
ಚಂದ್ರವಳ್ಳಿ ನ್ಯೂಸ್, ತುಮಕೂರು:
ರೈತರಿಗೆ ೨೦೨೪-೨೫ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಸಿಗುವ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಹನಿ ನೀರಾವರಿ : ಸದರಿ ಯೋಜನೆಯಡಿ ೨ ಹೆಕ್ಟೇರ್ವರೆಗೆ ಸಾಮಾನ್ಯ ವರ್ಗಕ್ಕೆ ಶೇ.೫೫ರಷ್ಟು ಹಾಗೂ ಪ.ಜಾತಿ/ಪ.ಪಂಗಡ ವರ್ಗಕ್ಕೆ ಶೇ.೯೦ರಷ್ಟು ಸಹಾಯಧನ ನೀಡಲಾಗುತ್ತಿದೆ. ಪ.ಜಾತಿ/ಪ.ಪಂಗಡ ರೈತರು ಹನಿ ನೀರಾವರಿ ಪಡೆದು ೭ ವರ್ಷಗಳಾಗಿದ್ದಲ್ಲಿ ಮತ್ತೊಮ್ಮೆ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ : ಸದರಿ ಯೋಜನೆಯಡಿ ಇಲಾಖೆಯಿಂದ ಯಾಂತ್ರೀಕರಣ, ಪ್ಯಾಕ್ ಹೌಸ್, ಸಂಸ್ಕರಣಾ ಘಟಕ, ಈರುಳ್ಳಿ ಶೇಖರಣಾ ಘಟಕ, ಕೃಷಿಹೊಂಡ, ಪಾಲಿಮನೆ, ಪಕ್ಷಿ ನಿರೋಧಕ ಬಲೆ ಘಟಕಗಳಿಗೆ ರೈತರಿಗೆ ಶೇಕಡ ೨೫ ರಿಂದ ೫೦ರವರೆಗೂ ಸಹಾಯಧನ ನೀಡಲಾಗುವುದು. ಯೋಜನೆ : ಸದರಿ ಯೋಜನೆಯಡಿ ಯಂತ್ರೋಪಕರಣಗಳಾದ ಪವರ್ ವೀಡರ್, ಬ್ರಷ್ ಕಟರ್, ಅಡಿಕೆ ಸಿಪ್ಪೆ ಸುಲಿಯುವ ಯಂತ್ರ, ದೋಟಿ, ಇತರೆ ಶೇ.೪೦ ರಿಂದ ೫೦ರವರೆಗೆ ಸಹಾಯಧನ ನೀಡಲಾಗುವುದು.ತೆಂಗಿನಲ್ಲಿ ಸಂಯೋಜಿತ ಬೇಸಾಯ ಯೋಜನೆ (ಐಔಆP) : ರೈತರ ತಾಕಿನಲ್ಲಿ ಸುಧಾರಿತ ಅಂತರ ಬೇಸಾಯ ಕ್ರಮಗಳನ್ನು ಕೈಗೊಳ್ಳಲು ಪ್ರತಿ ಹೆಕ್ಟೆರ್ಗೆ ೩೫೦೦೦ ರೂ.ಗಳಂತೆ ಎರಡು ವಾರ್ಷಿಕ ಕಂತುಗಳಲ್ಲಿ ೧೭೫೦೦ ರೂ.ಗಳ ಸಹಾಯಧನ ನೀಡಲಾಗುವುದು.೨೦೨೩-೨೪ ನೇ ಸಾಲಿನಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ: ಈ ಯೋಜನೆಯಡಿ ೨೦೨೪-೨೫ನೇ ಸಾಲಿನಲ್ಲಿ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ/ಪುನಶ್ಚೇತನ ಕಾರ್ಯಕ್ರಮಗಳಿಗೆ ಸಹಾಯಧನ ನೀಡಲಾಗುವುದು. ಬೆಳೆವಿಮೆ ಯೋಜನೆ : ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ಹವಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ, ಮಾವು, ಪಪ್ಪಾಯ, ದಾಳಿಂಬೆ ಬೆಳೆಗಳಿಗೆ ನೊಂದಾಯಿಸಿಕೊಳ್ಳಲು ಜುಲೈ ೧ ಕಡೆಯ ದಿನವಾಗಿದ್ದು, ರೈತರು ಯೋಜನೆಯ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಮತ್ತು ಜೇನುಕೃಷಿ ಈ ಯೋಜನೆಯಲ್ಲಿ ರೈತರ ತಾಕಿನಲ್ಲಿ ಜೇನುಪೆಟ್ಟಿಗೆ ಇಟ್ಟುಕೊಳ್ಳಲು ಸಹಾಯಧನ ನೀಡಲಾಗುವುದು.
ಈ ಎಲ್ಲಾ ಯೋಜನೆಗಳಿಗೆ ಜುಲೈ ೧೪ರೊಳಗಾಗಿ ಹತ್ತಿರದ ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತುಮಕೂರು-ಮೊ.ಸಂ. ೯೪೪೮೨೫೩೨೭೭ / ೯೫೩೮೬೧೭೮೭೧; ಗುಬ್ಬಿ-೯೫೩೫೭೮೧೯೬೩ / ೭೨೫೯೨೪೩೩೨೯; ಶಿರಾ-೯೮೪೪೦೪೨೩೫೬ / ೯೦೭೧೨೮೦೯೦೬; ಕುಣಿಗಲ್- ೯೩೪೨೯೫೯೬೯೦ / ೯೯೮೦೦೭೩೯೦೯; ತಿಪಟೂರು-೯೮೪೫೦೧೪೨೯೩ / ೯೯೬೪೭೯೧೯೧೦; ಚಿಕ್ಕನಾಯಕನಹಳ್ಳಿ-೯೬೮೬೦೫೬೭೦೫ / ೯೫೩೮೨೭೨೯೬೪; ಮಧುಗಿರಿ-೯೯೧೬೩೭೮೧೯೯ / ೮೦೯೫೫೧೩೯೯೨; ತುರುವೇಕೆರೆ-೯೪೪೮೪೧೬೩೩೪ / ೯೮೪೪೧೭೪೯೭೨, ಕೊರಟಗೆರೆ -೯೪೪೮೦೦೧೬೪೪ / ೯೪೮೦೨೪೩೪೨೯; ಪಾವಗಡ-೯೪೪೮೪೪೮೯೭೦ / ೯೮೮೬೭೩೬೬೬೪ನ್ನು ಸಂಪರ್ಕಿಸಬಹುದು.