ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಚೇರಿಯಲ್ಲಿ ಖಾಲಿಯಿರುವ ಭೂ ವಿಜ್ಞಾನಿ – 01, ಜಿಲ್ಲಾ ಪ್ರಯೋಗಾಲಯದಲ್ಲಿರುವ ಕಿರಿಯ ವಿಶ್ಲೇಷಣೆಗಾರರು-01, ನೀರಿನ ಮಾದರಿಗಳ ಸಂಗ್ರಹಗಾರರು – 01 ಹುದ್ದೆಗಳಿಗೆ ತಾತ್ಕಾಲಿಕ ಹೊರಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಭೂ ವಿಜ್ಞಾನಿ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕನಿಷ್ಠ ಶೇ.60 ರಷ್ಟು ಅಂಕಗಳನ್ನು ಪಡೆದಿರಬೇಕು. ದೂರಶಿಕ್ಷಣವನ್ನು ಪರಿಗಣಿಸುವುದಿಲ್ಲ. ಭೂವಿಜ್ಞಾನಿಯಾಗಿ ಕನಿಷ್ಟ 5 ವರ್ಷಗಳ ಅನುಭವ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 45 ವರ್ಷಗಳ ವಯೋಮಿತಿ ಮೀರಿರಬಾರದು. ಈ ಹುದ್ದೆಗೆ ಸೇವಾ ಶುಲ್ಕ ಮತ್ತು ಜಿಎಸ್.ಟಿ ಹೊರತುಪಡಿಸಿ 35,000 ಸಂಭಾವನೆ ನೀಡಲಾಗುವುದು.
ಕಿರಿಯ ವಿಶ್ಲೇಷಣೆಗಾರರ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೈಕ್ರೋ ಬಯಾಲಜಿ / ಬಯೋಕೆಮಿಸ್ಟ್ರಿ, ಬಯೋ ತಂತ್ರಜ್ಞಾನ/ಪರಿಸರ ವಿಜ್ಞಾನದಲ್ಲಿ ಎಂ.ಎಸ್ಸಿ / ಬಿ.ಎಸ್ಸಿ ಪದವಿ ಪಡೆದಿರಬೇಕು. ಕನಿಷ್ಠ ಶೇ.60 ರಷ್ಟು ಅಂಕಗಳನ್ನು ಪಡೆದಿರಬೇಕು. ದೂರಶಿಕ್ಷಣವನ್ನು ಪರಿಗಣಿಸುವುದಿಲ್ಲ. ನೀರಿನ ಗುಣಮಟ್ಟ ವಿಶ್ಲೇಷಣೆ ಮತ್ತು ಪರೀಕ್ಷೆಯಲ್ಲಿ ಕನಿಷ್ಟ 3 ವರ್ಷಗಳ ಅನುಭವ, ಎಂ.ಎಸ್.ಆಫೀಸ್‍ನಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 45 ವರ್ಷಗಳ ವಯೋಮಿತಿ ಮೀರಿರಬಾರದು. ಈ ಹುದ್ದೆಗೆ ಸೇವಾ ಶುಲ್ಕ ಮತ್ತು ಜಿಎಸ್.ಟಿ ಹೊರತುಪಡಿಸಿ 21,000 ಸಂಭಾವನೆ ನೀಡಲಾಗುವುದು.
ನೀರಿನ ಮಾದರಿಗಳ ಸಂಗ್ರಹಗಾರರ ಹುದ್ದೆಗೆ ಪಿಯುಸಿ ಯಲ್ಲಿ ವಿಜ್ಞಾನ ವಿಷಯ ಓದಿರಬೇಕು. ಕನಿಷ್ಟ ಶೇಕಡ 50 ರಷ್ಟು ಅಂಗಳನ್ನು ಗಳಿಸಿರಬೇಕು. ಲ್ಯಾಬ್ ಅಟೆಂಡರ್ ಸಹಾಯಕರಾಗಿ ಕನಿಷ್ಟ 3 ವರ್ಷಗಳ ಅನುಭವ ಹೊಂದಿರಬೇಕು. 35 ವರ್ಷಗಳ ವಯೋಮಿತಿ ಮೀರಿರಬಾರದು. ಈ ಹುದ್ದೆಗೆ ಸೇವಾ ಶುಲ್ಕ ಮತ್ತು ಜಿಎಸ್.ಟಿ ಹೊರತುಪಡಿಸಿ ಇಎಸ್‍ಐ, ಪಿಎಫ್, ಸಾರಿಗೆ ವೆಚ್ಚದೊಂದಿಗೆ 21,000 ಸಂಭಾವನೆ ನೀಡಲಾಗುವುದು.
ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, ಒಂದು ವರ್ಷದ ಅವಧಿಗೆ ನೇಮಿಸಿಕೊಳ್ಳಲಾಗುವುದು. ದೂರಶಿಕ್ಷಣ ಮೂಖಾಂತರ ಪಡೆದ ಅಭ್ಯರ್ಥಿಗಳು ಅರ್ಹರಿರುವುದಿಲ್ಲ.
ಅರ್ಜಿಗಳನ್ನು ಸೆಪ್ಟೆಂಬರ್ 08 ರೊಳಗಾಗಿ ಇ-ಮೇಲ್ [email protected] ಮೂಲಕ ಅಥವಾ ಖುದ್ದಾಗಿ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಜಿಲ್ಲಾಡಳಿತ ಭವನ, ಚಪ್ಪರದಕಲ್ಲು, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಈ ವಿಳಾಸಕ್ಕೆ ಸಲ್ಲಿಸಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

