ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ :
ತಾಲೂಕಿನ ರೈತರು ವಲಸೆ ಹೋಗಿ ದುಡಿಯಬಾರದು ಎಂದು ಕರ್ನಾಟಕ ಸರ್ಕಾರವು ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕಲ್ಪಿಸಿದ್ದು ಈ ಕಾಮಗಾರಿ ಮುಕ್ತಾಯಗೊಳ್ಳುವ ಹಂತದಲ್ಲಿದ್ದು ಶೀಘ್ರದಲ್ಲಿ ಕೆರೆಗಳಿಗೆ ನೀರು ಬಿಡಲಾಗುವುದು ಎಂದು ಶಾಸಕ ಎನ್.ಟಿ ಶ್ರೀನಿವಾಸ್ ಹೇಳಿದರು.
ನಾನು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಅತಿ ಶೀಘ್ರದಲ್ಲಿ ತಾಲೂಕಿನ 74 ಕೆರೆಗಳಿಗೆ ನೀರು ಬಿಡಲಾಗುವುದು.
ಶ್ರೀನಿವಾಸ್ ಎನ್ ಟಿ, ಶಾಸಕರು.
ನಮ್ಮ ಶಾಸಕರು ತಾಲೂಕಿನ ರೈತರು ವಲಸೆ ಹೋಗಬಾರದೆಂದು. 74 ಕೆರೆ ತುಂಬಿಸುವ ಯೋಜನೆ ಹಾಗೂ ಗುಡೆಕೋಟೆಯ ಕಾಳಸಾಪುರ ಬಳಿಯ ಹುಣಸೆ ಹಾಗೂ ಶೇಂಗಾ ಸಂಸ್ಥಾಪನ ಘಟಕವು ಕಲ್ಪಿಸಿದ್ದಾರೆ.
ಕಾವಲಿ ಶಿವಪ್ಪ ನಾಯಕ, ಅಧ್ಯಕ್ಷರು, ಪಟ್ಟಣ ಪಂಚಾಯಿತಿ.


