![](https://www.chandravallinews.com/wp-content/uploads/2024/06/WhatsApp-Image-2024-06-30-at-10.41.12-PM-1024x473.jpeg)
i
ಅನಾಥ ಮಕ್ಕಳಿಗೆ ಬೆಡ್ಗಳನ್ನು ವಿತರಿಸಿದ ಇನ್ನರ್ವೀಲ್ಹ್ ಕ್ಲಬ್
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒಂದು ವರ್ಷದಲ್ಲಿ ಇನ್ನರ್ವೀಲ್ಹ್ ಕ್ಲಬ್ನಿಂದ ನೂರ ಐವತ್ತು ಪ್ರಾಜೆಕ್ಟ್ಗಳನ್ನು ನೀಡಲಾಗಿದೆ ಎಂದು ಇನ್ನರ್ವೀಲ್ಹ್ ಕ್ಲಬ್ ಅಧ್ಯಕ್ಷೆ ಹಾಗೂ ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಮೋಕ್ಷರುದ್ರಸ್ವಾಮಿ ಹೇಳಿದರು.
ಮಹಿಳಾ ಸೇವಾ ಸಮಾಜದಲ್ಲಿರುವ ೨೫ ಅನಾಥ ಮಕ್ಕಳಿಗೆ ರೆಝ್ಸಿನ್ ಪೋಮ್ ಬೆಡ್ಗಳನ್ನು ವಿತರಿಸಿ ಮಾತನಾಡಿದರು.
ಎರಡು ಸರ್ಕಾರಿ ಶಾಲೆಗಳಿಗೆ ನೂರು ಲೀಟರ್ ಸಾಮರ್ಥ್ಯವುಳ್ಳ ಆರ್.ಓ. ವಾಟರ್ ಫಿಲ್ಟರ್, ಬೆಂಚ್, ನೋಟ್ಬುಕ್ಗಳನ್ನು ವಿತರಿಸಿದ್ದೇವೆ. ಇಬ್ಬರು ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ಕೊಡಲಾಗಿದೆ. ಇದರಿಂದ ಅವರು ಮನೆಯಲ್ಲಿಯೇ ಬಟ್ಟೆಗಳನ್ನು ಹೊಲಿಯುವ ಮೂಲಕ ಸ್ವಾವಲಂಭಿಯಾಗಿ ಬದುಕಲು ನೆರವಾಗಲಿದೆ ಎಂದರು.
ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಗಿದೆ.
ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗಿದೆ. ಒಟ್ಟಾರೆ ಒಂದು ವರ್ಷದ ನನ್ನ ಅವಧಿಯಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿರುವ ಆತ್ಮತೃಪ್ತಿಯಿದೆ ಎಂದು ಮೋಕ್ಷರುದ್ರಸ್ವಾಮಿ ತಿಳಿಸಿದರು.
ವೀಣಸ್ವಾಮಿ ಮಾತನಾಡಿ ಇನ್ನರ್ವೀಲ್ಹ್ ಕ್ಲಬ್ ಅಧ್ಯಕ್ಷೆ ಶೀಮತಿ ಮೋಕ್ಷರುದ್ರಸ್ವಾಮಿ ಒಂದು ವರ್ಷದ ಅವಧಿಯಲ್ಲಿ ಅನೇಕ ಉಪಯುಕ್ತ ಕೆಲಸಗಳನ್ನು ಮಾಡಿದ್ದಾರೆ. ಮಹಿಳಾ ಸೇವಾ ಸಮಾಜದಲ್ಲಿರುವ ೨೫ ಅನಾಥ ಮಕ್ಕಳಿಗೆ ಗುಣಮಟ್ಟದ ರೆಝ್ಸಿನ್ ಬೆಡ್ಗಳನ್ನು ನೀಡಿರುವುದಲ್ಲದೆ ಬಡ ಮಕ್ಕಳಿಗೆ ಪುಸ್ತಕ, ನೋಟ್ಬುಕ್ಗಳನ್ನು ವಿತರಿಸಿ ಶಿಕ್ಷಣಕ್ಕೆ ನೆರವಾಗಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲತಾ ಉಮೇಶ್, ರಾಜೇಶ್ವರಿ ಸಿದ್ದರಾಂ, ನಂದಿನಿಶಿವಪ್ರಕಾಶ್, ಶಿಲ್ಪಜಗದೀಶ್, ಭಾಗ್ಯ ಕುಮಾರ್, ಮಹಾಂತಮ್ಮ, ವಿಜಯ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.