ಹೆಚ್.ಎಂ ರೇವಣ್ಣ ಅವರಿಗೆ ಹೇಳಿಕೊಳ್ಳೋಕ್ಕೆ ಒಂದು ಕ್ಷೇತ್ರ ಇಲ್ಲ, ಒಂದು ನೆಲೆ ಇಲ್ಲ ! 

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೋಕರ್ ಆಗಿಯೇ ನೀವು “ಗ್ಯಾರಂಟಿ ಸಮಿತಿಯ ಅಧ್ಯಕ್ಷರು” ಆಗಿರೋದು ಹೆಚ್.ಎಂ ರೇವಣ್ಣ ಅವರೇ, ನಿಮಗೆ ಹೇಳಿಕೊಳ್ಳೋಕ್ಕೆ ಒಂದು ಕ್ಷೇತ್ರ ಇಲ್ಲ, ಒಂದು ನೆಲೆಯೂ ಇಲ್ಲ !  ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

ನಿಮ್ಮ ಲಾಭಕ್ಕೆ, ನಿಮ್ಮ ಸ್ವಂತಕ್ಕೆ ಜನರ ತೆರಿಗೆ ದುಡ್ಡಿನಲ್ಲಿ ಉಚಿತ ಸವಲತ್ತುಗಳನ್ನು ಪಡೆಯುತ್ತಿರುವ ಜೋಕರ್‌ನೀವಲ್ಲವೇ

- Advertisement - 

ಮೊದಲು ಚುನಾವಣೆಯಲ್ಲಿ ಗೆದ್ದು ಸರ್ಕಾರದ ಕ್ಯಾಬಿನೆಟ್‌ದರ್ಜೆಯ ಸ್ಥಾನಮಾನ, ಸವಲತ್ತುಗಳನ್ನು ಪಡೆಯಿರಿ. ಇಸ್ಪೀಟ್‌, ಬೆಟ್ಟಿಂಗ್‌ದಂಧೆ ನಡೆಸಿ ಕರ್ನಾಟಕ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅಕ್ರಮವಾಗಿ ನೂರಾರು ಕೋಟಿ ಸಂಪಾದಿಸಿ ಜೈಲು ಸೇರಿದ್ದಾನೆ. ಕಾಂಗ್ರೆಸ್‌ಪಕ್ಷದಲ್ಲಿ ಇಂತಹ ದಂಧೆಕೋರರು ತುಂಬ ಜನ ಇದ್ದಾರೆ.

ಮೊದಲು ಅಂತಹವರ ಬಗ್ಗೆ ಧ್ವನಿ ಎತ್ತಿ, ಅದನ್ನು ಬಿಟ್ಟು ಕೋಡಂಗಿ ರೀತಿ ಹೇಳಿಕೆ ನೀಡಬೇಡಿ. ನಿಮಗೆ ರಾಜಕೀಯ ವನವಾಸ ಕೊಟ್ಟಿದ್ದು ಸಹ ಜೆಡಿಎಸ್ ಪಕ್ಷ ಎಂಬುದು ಮರೆತುಹೋಯ್ತೇ ? ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

- Advertisement - 

 

 

 

 

Share This Article
error: Content is protected !!
";